
ಶಿವಮೊಗ್ಗ: ಇಂದು ಜಿಲ್ಲಾ ಪೋಲಿಸ್ ಇಲಾಖೆ ಹಾಗೂ ಆಶಾ ಜ್ಯೋತಿ ರಕ್ತ ಕೇಂದ್ರದ ಸಹಯೋಗದಲ್ಲಿ ಶಿವಮೊಗ್ಗ ನಗರದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವಾನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಒಟ್ಟು ೪೬ ಜನರು ರಕ್ತದಾನ ಮಾಡಿದ್ದಾರೆ. ರಕ್ತದಾನ ಶ್ರೇಷ್ಟದಾನವಾಗಿದೆ. ಈ ಶಿಬಿರದಲ್ಲಿ ಗ್ರಾಂಮಾಂತರ ಪೋಲಿಸ್ ಠಾಣೆ, ಮಹಿಳಾ ಪೋಲಿಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ರಕ್ತದಾನದಲ್ಲಿ ಪಾಲ್ಗೊಂಡಿದ್ದಾರೆ. ರಕ್ತದಾನ ಮಾಡಿ ಜೀವ ರಕ್ಷಿಸುವ ಕಾರ್ಯವನ್ನು ಮಾಡುವಂತೆ ಜಿಲ್ಲಾ ಪೋಲಿಸ್ ಇಲಾಖೆ ತಿಳಿಸಿದೆ.