ಬ್ಲಾಕ್ ಕಾಫಿ: ಬ್ಲಾಕ್ ಕಾಫಿ ಶುದ್ಧ ಮತ್ತು ಸರಳವಾದ ಪಾನೀಯವಾಗಿದ್ದು, ಹಾಲು, ಸಕ್ಕರೆ ಸೇರಿಸದ ಕಾರಣ ಕಡಿಮೆ ಕ್ಯಾಲೊರಿಯನ್ನು ನೀಡುತ್ತದೆ ಮತ್ತು ದೇಹದಲ್ಲಿ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿ. ಇದರಲ್ಲಿ ಇರುವ ನೈಸರ್ಗಿಕ ಆಂಟಿ-ಆಕ್ಸಿಡೆಂಟ್ಗಳು ದೇಹವನ್ನು ಮಲಿನೀಕರಣದಿಂದ ರಕ್ಷಿಸಿ, ರೋಗ ನಿರೋಧಕ ಶಕ್ತಿಯನ್ನು ಉತ್ತಮವಾಗಿರಿಸಲು ನೆರವಾಗುತ್ತದೆ. ಬೆಳಗ್ಗೆ ಅಥವಾ ಕೆಲಸದ ಮಧ್ಯೆ ಬ್ಲಾಕ್ ಕಾಫಿಯನ್ನು ಸೇವಿಸುವುದು ಮನಸ್ಸಿಗೆ ಹಿತಕರ ಹಾಗೂ ದೈಹಿಕ ಶಕ್ತಿಗೂ ಒಳ್ಳೆಯ ಪ್ರೇರಣೆ ನೀಡುತ್ತದೆ. ವ್ಯಾಯಾಮಕ್ಕೂ ಮೊದಲು ಇದನ್ನು ಸೇವಿಸಿದರೆ ಹೆಚ್ಚಿನ ದೈಹಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ. ಇದು ಕ್ಯಾಲೊರಿ ಮುಕ್ತ ಪಾನೀಯವಾಗಿದ್ದು ತೂಕ ನಿರ್ವಹಣೆಗೆ ಸಹಾಯಕಾರಿ. ಇದರಲ್ಲಿ ಕ್ಲೋರೋಜೆನಿಕ್ ಆಮ್ಲ ಇರುವುದರಿಂದ ಹಸಿವು ಕಡಿಮೆ ಮಾಡಿ ಜೀರ್ಣಕ್ರಿಯೆಗೆ ಸಹಕರಿಸುವುದರ ಜೊತೆಗೆ, ಇದರಲ್ಲಿನ ಕೆಫಿನ್ ಅಂಶವು ನರಪ್ರೇಕ್ಷಕ ಅಡೆನೂಸಿನ್ ಕಡಿಮೆಗೊಳಿಸಿ ನ್ಯೂರಾನ್ಗಳನ್ನು ಹೆಚ್ಚಿಸುವುದರ ಜೊತೆಗೆ ಮನಸ್ಥಿತಿ ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ಮುಖ್ಯವಾಗಿ ಇದರಲ್ಲಿ ಸಕ್ಕರೆ ಅಥವಾ ಕ್ರೀಮ್ ಬಳಸದೇ ಇರುವುದರಿಂದ ಮಧುಮೇಹ, ಉರಿಯೂತವನ್ನು ಕಡಿಮೆಗೊಳಿಸಿ ಸದೃಡ ಆರೋಗ್ಯವನ್ನು ವೃದ್ಧಿಗೊಳಿಸಲು ಸಹಕಾರಿಯಾಗಿದೆ.
