
ಭದ್ರಾವತಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಶತ್ನಿಂದ ಫ.ಗು ಹಳಕಟ್ಟಿ ಅವರ ಜಯಂತಿ ಅಂಗವಾಗಿ ಹಳೇನಗರ ಅಕ್ಕಮಹಾದೇವಿ ಸಮುದಾಯಭವನದಲ್ಲಿ ಏರ್ಪಡಿಸಿದ್ದ ಹಿರೇನಲ್ಲೂರು ಎಚ್.ಎಸ್ ವೀರಸಂಗಪ್ಪ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಕಾರ್ಯಕ್ರಮ ಉದ್ಘಾಟಿಸಿದರು.
ವಚನಗಳ ಪಿತಾಮಹ ಫ.ಗು ಹಳಕಟ್ಟಿ ಅವರು ಬಸವಾದಿ ಶಿವಶರಣ ವಚನ ಸಾಹಿತ್ಯಗಳ ಸಾರವನ್ನು ಸಂಗ್ರಹಿಸಿ, ಸಂರಕ್ಷಿಸಿ, ಪ್ರಕಟಿಸಿದ ಪರಿಣಾಮ ಇಂದು ಬಹಳಷ್ಟು ವಚನಕಾರರ ಇತಿಹಾಸ ತಿಳಿಯಲು ಸಾಧ್ಯವಾಗಿದೆ. ಇದರ ಹಿಂದಿರುವ ಶ್ರಮ, ಶ್ರದ್ಧೆಯನ್ನು ಇಂದಿನ ಯುವ ಪೀಳಿಗೆ ಅನುಸರಿಸಬೇಕು ಎಂದು ಹೊನ್ನಾಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ ಧನಂಜಯ ತಿಳಿಸಿದರು.
ತಾಲ್ಲೂಕು ಅಧ್ಯಕ್ಷ ಕತ್ತಲೆಗೆರೆ ತಿಮ್ಮಪ್ಪ, ದತ್ತಿ ದಾನಿ ಕುಮಾರಪ್ಪ, ಎನ್.ಎಸ್ ಮಲ್ಲಿಕಾರ್ಜುನಯ್ಯ, ಗಂಗಾ ಕುಬ್ಸದ್, ಮಲ್ಲಿಕಾಂಬಾ, ವಿರೂಪಾಕ್ಷಪ್ಪ ಇತರರಿದ್ದರು.