
ಶಿವಮೊಗ್ಗ: ಭದ್ರಾ ಜಲಾಶಯದ ಬಲ ಮತ್ತು ಎಡದಂಡೆ ನಾಲೆಗಳ ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ. ನೀರಿನ ಪ್ರಮಾಣ ಹೆಚ್ಚಾದ ಕಾರಣ ದುರಸ್ತಿ ಕಾರ್ಯದಲ್ಲಿ ವಿಳಂಬವಾಗುತ್ತಿದೆ. ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು 52 ಅಡಿ ಮಟ್ಟದಲ್ಲಿ ಇರುವ ಎಡದಂಡೆ ನಾಲೆಯ ಕಾಂಕ್ರೀಟ್ ಬೀಮ್ ಸಂಪೂರ್ಣ ಹಾಳಾಗಿದೆ ಮತ್ತು ಹೊಸ ಗೇಟ್ ಅಳವಡಿಸಲು ಅಗತ್ಯವಿದೆ ಎಂದು ತಿಳಿಸಿದ್ದಾರೆ. ಜುಲೈ ಅಂತ್ಯದ ವೇಳೆಗೆ ದುರಸ್ತಿ ಕಾರ್ಯ ಮುಗಿಯುವ ಸಾಧ್ಯತೆ ಇದೆ.
ಬಲ ದಂಡೆ ನಾಲೆಯಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪುನರಾರಂಭಗೊಂಡಿದ್ದು. ಬಲ ದಂಡೆ ಮತ್ತು ಎಡದಂಡೆ ನಾಲೆ ಹಾಗೂ ಉಪ ನಾಲೆಗಳಲ್ಲಿ ಒಂದೇ ಕಾಲಕ್ಕೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಬಲ ದಂಡೆ ನಾಲೆಯ ಪ್ರಾರಂಭದಲ್ಲಿ ನಾಲ್ಕು ತಾಲ್ಲೂಕುಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಬಳಕೆಗೆ ತೂಬು ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನೊಂದು ವಾರಲ್ಲಿ ಪೂರ್ಣವಾಗುತ್ತದೆ. ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಎಡದಂಡೆ ನಾಲೆ ಕಾಮಗಾರಿ ವಿಳಂಬವಾಗುತ್ತಿದೆ. ದಶಕಗಳಿಂದ ಸೋರಿಕೆಯಲ್ಲಿದ್ದ ನಾಲೆ ಗೇಟ್ ದುರಸ್ತಿ ಕಾಮಗಾರಿ ಅನಿವಾರ್ಯವಾಗಿತ್ತು. ಜಲಾಶಯದ ೫೨ ಅಡಿ ಮಟ್ಟದಲ್ಲಿರುವ ನಾಲೆಯ ಕಾಂಕ್ರೀಟ್ ಬೀಮ್