
ಭದ್ರಾವತಿ: ಭದ್ರ ಜಲಾಶಯದ ಮುಂದೆ ಇಂದು ಭದ್ರಾವತಿ, ಚನ್ನಗಿರಿ ಹಾಗೂ ದಾವಣಗೆರೆ ರೈತರಿಂದ ಪ್ರತಿಭಟನೆ ನಡೆಯಲಿದೆ ಎಂದು ತಿಳಿದು ಬಂದಿದೆ. ಭದ್ರಾಜಲಾಶಯದ ಬಲದಂಡೆ ನಾಲೆಯ ನೀರಿನ ಮಟ್ಟಕ್ಕಿಂತ ೫ ಅಡಿ ಕೆಳಭಾಗದಲ್ಲಿ ನಾಲೆಯನ್ನು ಸೀಳಿ ಪಕ್ಕದ ಜಿಲ್ಲೆ ಹಾಗೂ ತಾಲ್ಲೂಕುಗಳಾದ ಅಜ್ಜಂಪುರ, ಹೊಸದುರ್ಗ, ಚಿಕ್ಕಮಗಳೂರು, ಕಡೂರು, ಬೀರೂರುಗಳಿಗೆ ಕುಡಿಯುವ ನೀರಿಗೆ ದೊಡ್ಡದಾದ ಪೈಪ್ ಅಳವಡಿಸುತ್ತಿರುವುದು ಭದ್ರಾವತಿ ಪ್ರದೇಶದ ರೈತ ಬಂಧುಗಳ ಆಕ್ರೋಶಕ್ಕೆ ಕಾರಣವಾಗಿದೆ. ಭದ್ರಾವತಿ ಪ್ರದೇಶದ ರೈತರ ಬೆಳೆಗಳಿಗೆ ನೀರಿನ ಅಭಾವವಾಗುವ ಕಾರಣ ಈ ಪ್ರತಿಭಟನೆಯನ್ನು ಮಾಡಲಿದ್ದಾರೆ ಎನ್ನಲಾಗಿದೆ.
ಭದ್ರಾವತಿ, ಚನ್ನಗಿರಿ, ದಾವಣಗೆರೆಗಳಿಂದ ರೈತ ಬಂಧುಗಳು ಈ ಭೃಹತ್ ಪ್ರತಿಭಟನೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರೈತ ಮುಖಂಡರು ಹಾಗೂ ಜನ ನಾಯಕರು ವಿನಂತಿಸಿಕೊಂಡಿದ್ದಾರೆ. ಈಗಾಗಲೇ ೫ ದಿನಗಳಿಂದ ಹಗಲು, ರಾತ್ರಿ ಎನ್ನದೆ ಭದ್ರಾ ನೀರಾವರಿ ಇಲಾಖೆ ಕಛೇರಿಯ ಮುಂದೆ ಧರಣಿಯನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.