ಬೆಂಗಳೂರು: ಉತ್ತರ ಪ್ರದೇಶದ ಎಸ್.ಪಿ ಸಂಸದ ರಾಜೀವ್ ರೈ ಅವರು ಬೆಂಗಳೂರಿನ ಟ್ರಾಫಿಕ್ ಮತ್ತು ಟ್ರಾಫಿಕ್ ಪೊಲೀಸರ ಅಸಮರ್ಥತೆ ಬಗ್ಗೆ ಎಕ್ಸ್ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಿಎಂ ಸಿದ್ದರಾಮಯ್ಯರನ್ನು ಟ್ಯಾಗ್ ಮಾಡಿದ್ದಾರೆ. ಭಾನುವಾರ ರಾಜ್ಕುಮಾರ್ ಸಮಾಧಿ ಬಳಿ ಒಂದು ಗಂಟೆಗೂ ಹೆಚ್ಚು ದಟ್ಟ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಾಗಿ ಹೇಳಿದ ಅವರು, ಟ್ರಾಫಿಕ್ ಪೊಲೀಸರು ಕರೆಗಳಿಗೆ ಸ್ಪಂದಿಸದಿರುವ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡಿದ್ದು, ಬೆಂಗಳೂರಿನ ಟ್ರಾಫಿಕ್ ದೇಶದಲ್ಲೇ ಕುಖ್ಯಾತಿಯಾಗುತ್ತಿದೆ ಎಂಬ ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸದ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದೆಹಲಿಯಲ್ಲಿ ರಾಜೀವ್ ರೈ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸುವುದಾಗಿ ಹೇಳಿದ್ದಾರೆ.
