
ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನಲ್ಲಿ ಇಂದು ವರುಣನ ಆರ್ಭಟ ಜೋರಾಗಿದ್ದು, ತಾಲ್ಲೂಕಿನ ಶಿಶಿಲದ ಕಪಿಲ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ.
ಆ ಭಾಗದ ಜನರಿಗೆ ಪ್ರವಾಹದ ರೀತಿಯಲ್ಲಿ ತುಂಬಿ ಹರಿಯುತ್ತಿರುವ ನೀರಿನಿಂದ ಸಂಚರಿಸಲು ಕಷ್ಟವಾಗಿದೆ ಎಂದು ಪಂಚಾಯಿತಿ ಅಧ್ಯಕ್ಷ ಸುಧೀನ್ ಡಿ ಹೇಳಿದ್ದಾರೆ. ನದಿಯ ಅಕ್ಕ ಪಕ್ಕದ ತೋಟಗಳಿಗೆ ನೀರು ನುಗ್ಗಿದೆ. ಪಕ್ಕದಲ್ಲಿರುವ ಕಿಂಡಿ ದೇವಳದ ಸಂಪರ್ಕ ರಸ್ತೆಯು ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದು, ತೂಗು ಸೇತುವೆ ತನಕ ನೀರು ಹರಿಯುತ್ತಿದೆ ಎಂದು ತಿಳಿದು ಬಂದಿದೆ.