
ತೀರ್ಥಹಳ್ಳಿ: ಈ ಹಿಂದೆ ತೀರ್ಥಹಳ್ಳಿ ನಗರದ ಶೀಬಿನಕೆರೆ ಶಾಲೆ ಹಾಗೂ ಕೆಂದಾಳುಬೈಲು ಶಾಲಾ ವಿದ್ಯಾರ್ಥಿಗಳು ಮೊಬೈಲ್ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದು, ಇದಕ್ಕೆ ಪೋಷಕರು ಹಾಗೂ ಸಾರ್ವಜನಿಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು ಅಂತೆಯೇ ಇಲ್ಲಿ ಓರ್ವ ವ್ಯಕ್ತಿಯು ಬೆಳಗಾವಿಯಿಂದ ಸೈಕಲ್ ಚಲಾಯಿಕೊಂಡು ತೀರ್ಥಹಳ್ಳಿಯ ವರೆಗೆ ಬಂದಿದ್ದು, ಗುರುವಾರದಂದು ಶೀಬಿನ ಕೆರೆ ಶಾಲೆಗೆ ಭೇಟಿ ನೀಡಿ ಮಕ್ಕಳ ನಿರ್ಧಾರಕ್ಕೆ ಅಭಿನಂದೆಯನ್ನು ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಕೆಂದಾಳುಬೈಲು ಶಾಲೆಗೂ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ರಮೇಶ್ ಪೂಜಾರಿ ಸೈಕಲ್ ಮೂಲಕ 335ಕಿಮೀ ಕ್ರಮಿಸಿದ್ದು, ಅವರು ಮೂಲತ: ಉಡುಪಿ ಜಿಲ್ಲೆಯ ಬೈಂದೂರಿನವರಾಗಿದು, ಈಗ ಸಂಕೇಶ್ವರದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಟಿ.ವಿ ಸತೀಶ್ ಮತ್ತು ಸಮಾನ ಮನಸ್ಥಿತಿ ಉಳ್ಳವರು ರಮೇಶ್ ಪೂಜಾರಿಯವರನ್ನು ಗೌರವಿಸಿದರು.
ಪ್ರ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗ್ಡೆ, ಕಸಾಪ ತಾಲ್ಲೂಕು ಅಧ್ಯಕ್ಷ ಟಿ.ಕೆ ರಮೇಶ್ ಶೆಟ್ಟಿ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್, ಶ್ರೀನಿವಾಸ್, ಹಾಗೂ ಸಂತೋಷ್ ಇತರರು ಉಪಸ್ಥಿತರಿದ್ದರು.