
ಬೆಂಗಳೂರು: ಕರ್ನಾಟಕವು ಒಂದು ರೀತಿಯಲ್ಲಿ ಡ್ರಗ್ಸ್ನ ಸ್ವರ್ಗವಾಗುತ್ತಿದ್ದು. ಸಾಕಷ್ಟು ಯುವ ಜನರು ಈ ಡ್ರಗ್ಸ್ ಎಂಬ ವ್ಯಸನಕ್ಕೆ ದಾಸರಾಗುತ್ತಾ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಡ್ರಗ್ಸ್ ಇಂದು ಎಲ್ಲಾ ಕಡೆಯಲ್ಲೂ ರಾಜಾರೋಷವಾಗಿ ಸಿಗುತ್ತಿದೆ. ಪ್ರಿಯಾಂಕ್ ಖರ್ಗೆ ಆಪ್ತರಾಗಿರುವ ಕಾಂಗ್ರೆಸ್ಸಿನ ಗುಲ್ಬರ್ಗ ದಕ್ಷಿಣ ಬ್ಲಾಕ್ ಅಧ್ಯಕ್ಷ ಲಿಂಗರಾಜ್ ಕಣ್ಣಿರವರು ಅನೇಕ ವರ್ಷಗಳಿಂದ ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮಲ್ಲಿನಾಥ್ ಸೊಂತ್ ಎಂಬುವವÀರು ಮಗನೂ ಸಹ ಡ್ರಗ್ಸ್ ಸಾಗಾಟದಲ್ಲಿ ಭಾಗಿಯಾಗಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಿಯಾಂಕ್ ಖರ್ಗೆಯ ಸುತ್ತಮುತ್ತ ಇರುವವರು ಎಂಥ ಚಿನ್ನದಂಥ ಶಿಷ್ಯಂದಿರು ! ಪ್ರಿಯಾಂಕ್ ಖರ್ಗೆಯವರು ತಮ್ಮ ಇಲಾಖೆ ಬಿಟ್ಟು ದೇಶದ ಎಲ್ಲಾ ವಿಚಾರಗಳನ್ನು ಮಾತನಾಡುತ್ತಾರೆ, ಈ ವಿಷಯ ಅಲ್ಲಿನ ಪೋಲಿಸರಿಗೆ ಗೊತ್ತಾಗದೆ ಇರುವುದು ಅಚ್ಚರಿಯ ಸಂಗತಿ ಎಂದು ಎನ್. ರವಿಕುಮಾರ್ ವ್ಯಂಗ್ಯ ಮಾಡಿದ್ದಾರೆ.