
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಬಂದಿದೆ. ಪೋಷಕರನ್ನು ಗಮನದಲ್ಲಿಟ್ಟುಕೊಂಡು, ದೊಡ್ಡ ಬ್ಯಾಗ್ಗಳು ಹಾಗೂ ಮಕ್ಕಳನ್ನು ಜೊತೆಯಲ್ಲಿ ಕರೆತರಲು ಕಷ್ಟಕರವಾದ್ದರಿಂದ, ಬೆಂಗಳೂರು ಎರ್ಪೋರ್ಟ್ ಟರ್ಮಿನಲ್ 1 ಮತ್ತು ಟರ್ಮಿನಲ್ 2ರಲ್ಲಿ ಹ್ಯಾಂಡ್ಬ್ಯಾಗ್ ಟ್ರಾಲಿಗಳೊಂದಿಗೆ ಬೇಬಿ ಕ್ಯಾರಿಯರ್ಗಳನ್ನು ಒದಗಿಸಲಾಗಿದೆ. 2 ತಿಂಗಳಿನಿಂದ 4 ವರ್ಷದೊಳಗಿನ ಚಿಕ್ಕ ಮಕ್ಕಳಿಗೆಂದೆ ಪ್ರಯಾಣಿಸಲು ಬೇಬಿ ಕ್ಯಾರಿಯರ್ಗಳನ್ನು ರಚನೆಗೊಳಿಸಿದ್ದಾರೆ. ಮಗು ಹಾಗೂ ಬ್ಯಾಗ್ ಎರಡನ್ನೂ ಒಬ್ಬರೇ ನಿಯಂತ್ರಿಸಬಹುದಾಗಿದೆ.