
ಬಾಳೆಹೊನ್ನೂರು: ಮಾಗೋಡು ಕಣತಿ ಸರ್ಕಾರಿ ಪ್ರೌಢಾ ಶಾಲೆಯಲ್ಲಿ, ಪಟ್ಟಣದ ಲಯನ್ಸ್ ಕ್ಲಬ್ನಿಂದ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ವನ ಮಹೋತ್ಸವದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ಪ್ರಕೃತಿಯನ್ನು ಸಂರಕಿಸ್ಷಬೇಕು ಎಂದು ಮಾಹಿತಿಯನ್ನು ನೀಡಿದ್ದಾರೆ. ಈ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಜೆ. ವಿಕ್ರಮ್ ಹಾಗೂ ಕಾರ್ಯದರ್ಶಿ ಸುಧಾಕರ್ ರವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ಗಿಡವನ್ನು ನೆಟ್ಟು ಪೋಷಿಸಿದರೆ ನಮಗೆ ಉಸಿರಾಡಲು ಶುದ್ಧ ಗಾಳಿಯನ್ನು ನೀಡುತ್ತದೆ, ಅಂತರ್ಜಲ ಮಟ್ಟ, ನೆರಳು, ಹಣ್ಣು ಮುಂತಾದವುಗಳು ದೊರೆಯುತ್ತದೆ. ಇದರಿಂದ ಮುಂದಿನ ಪೀಳಿಗೆಗೂ ಅವಶ್ಯಕವಾಗುತ್ತದೆ. ಮನುಷ್ಯನ ದುರಾಸೆಯಿಂದ ಪರಿಸರವನ್ನು ನಾಶ ಮಾಡುತ್ತಿದ್ದಾನೆ, ಇದರಿಂದಾಗಿ ಭೂ-ಕುಸಿತಹಾರ ಕೊರೆತ, ನೀರಿನ ಅಭಾವ ಮುಂತಾದ ಸಂಕಷ್ಟಗಳು ಎದರಾಗುತ್ತಿದೆ. ಆದ್ದರಿಂದ ಮನೆ ಒಂದು ಗಿಡವನ್ನಾದರೂ ನೆಟ್ಟು ಪೋಷಿಸ ಬೇಕು ಎಂದು ತಿಳಿಸಿದರು.
ವಲಯ ಅಧ್ಯಕ್ಷ ಎಂ.ಡಿ. ಶಿವರಾಮ್, ಪೂರ್ವಾಧ್ಯಕ್ಷ ಎಂ.ಆರ್ ಮಂಜುನಾಥ್, ಸದಸ್ಯರಾದ ದಿವಾಕರ್, ವಿಜಯೇಂದ್ರ, ನವೀನ್, ಮುಖ್ಯಶಿಕ್ಷಕ ಮಂಜುನಾಥ್ ಹಾಗೂ ಲಯನ್ಸ್ ಕ್ಲಬ್ ಖಜಾಂಚಿ ಕೆ.ಸಿ ರವೀಂದ್ರ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.