
ಬೈಂದೂರು: ಪೋಲಿಸರು ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದು. ಹಿಂಸಾತ್ಮಕವಾಗಿ ಕಾರಿನಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವೇಳೆ ಪೋಲಿಸರು ತಡೆದು ದನಗಳನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಒತ್ತಿನೆಣ್ಣೆ ತಿರುವಿನಲ್ಲಿ ನಡೆದಿದ್ದು.
ನಿನ್ನೆ ಬೈಂದೂರು ಪೋಲಿಸ್ ಠಾಣೆ ಪೋಲಿಸ್ ಉಪನಿರೀಕ್ಷರಾದ ನವೀನ್ ಬೋರ್ಕರ್ರವರಿಗೆ ಅಕ್ರಮ ಗೋ ಸಾಗಣೆಯ ಖಚಿತ ಮಾಹಿತಿ ಮೇರೆಗೆ ಬೈಂದೂರು ಒತ್ತಿನೆಣ್ಣೆಯ ತಿರುವಿನಲ್ಲಿ ಬ್ಯಾರಿಕೇಡ್ ಹಾಕಿ ಬೈಂದೂರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿರುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು.
ಬೈಂದೂರು ಕಡೆಯಿಂದ ಬೆಳ್ಳಂಬೆಳಿಗ್ಗೆ 6 ಗಂಟೆ ಸಮಯಕ್ಕೆ ಬಂದ ಕೆಂಪು ಬಣ್ಣದ ಕೆಎ-47-ಎಮ್-8960 ನಂಬರ್ನ ಬ್ರೀಜಾ ಕಾರನ್ನು ತಡೆದು ನಿಲ್ಲಸಿದಾಗ ಕಾರನ್ನು ಹಿಂದಕ್ಕೆ ರಿವರ್ಸ್ ತೆಗೆದುಕೊಳ್ಳಲು ಪ್ರಯಸತ್ನಿಸಿದ್ದು ಹಿಂಬದಿ ವಾಹನಗಳಿದ್ದ ಕಾರಣ ಕಾರನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿದ್ದ ಇಬ್ಬರು ವ್ಯಕ್ತಿ ಓಡಿ ಹೋಗಿರುತ್ತಾರೆ. ಕಾರಿಗೆ ಟಿಂಟ್ ಗ್ಲಾಸ್ ಅಳವಡಿಸಿದ್ದು ಯಾವುದೇ ಪರವಾನಗಿ ಪಡೆಯದೇ ಕಾರಿನ ಡಿಕ್ಕಿಯಲ್ಲಿ ನಾಲ್ಕು ದನಗಳ ಕಾಲು ಕಟ್ಟಿ ಹಿಂಸಾತ್ಮಕವಾದ ರೀತಿಯಲ್ಲಿ ಒಂದರ ಮೇಲೆ ಒಂದನ್ನು ಹಾಕಿ ಎಲ್ಲಿಂದಲೋ ಮಾಂಸ ಮಾಡುವ ಉದ್ದೇಶದಿಂದ ಕಳವು ಮಾಡಿ ಸಾಗಾಟ ಮಾಡಿರುವುದಾಗಿದೆ. ಘಟನಾ ಸಂಬಂಧ ಬೈಂದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.