
ಚಿಕ್ಕಮಗಳೂರು: ಮಕ್ಕಳೇ ಮುಂದಿನ ಭವಿಷ್ಯವಾಗಿರುವ ಕಾರಣ ಅವರ ಬಾಲ್ಯವನ್ನ ಸುರಕ್ಷಿತಗೊಳಿಸುವ ಅಡಿಯಲ್ಲಿ ಈ ಯೋಜನೆ ಜಾರಿಗೊಂಡಿದ್ದು, ಶಾಲಾ ಹಂತದಲ್ಲಾಗುವ ಬಾಲ್ಯ ವಿವಾಹ, ಕಿಶೋರಿ ಗರ್ಭಧಾರಣೆ, ಲೈಂಗಿಕ ದೌರ್ಜನ್ಯ, ಪೋಕ್ಸೊ ಕಾಯಿದೆಯ ಬಗ್ಗೆ ಅರಿವು ನೀಡುವುದು ಇದರ ಉದ್ದೇಶವಾಗಿದೆ.
ಶಾಲೆಯಿಂದ ಹೊರಗುಳಿಯುವ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಪಡಬಹುದು ಅಥವಾ ಗರ್ಭೀಣಿಯರಾಗುವ ಸಂಭವ ಹೆಚ್ಚು ಈ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನ ಯೋಜನೆ ಮೂಲಕ ಹಮ್ಮಿಕೊಂಡ್ಡಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕಿರ್ತನ ತಿಳಿಸಿದರು.