
ನಿನ್ನೆ ನಡೆದ ಭೂಕಂಪನ ಮತ್ತು ಸುನಾಮಿ ಘಟನೆ ಮತ್ತೊಮ್ಮೆ ಬಾಬಾ ವಂಗಾ ನುಡಿದ ಭವಿಷ್ಯವಾಣಿ ನಿಜವಾಗಿರುವುದನ್ನು ಸಾಬೀತುಪಡಿಸಿದೆ. ‘ದಿ ಫ್ಯೂಚರ್ ಐ ಸಾ’ ಎಂಬ ತಮ್ಮ ಪುಸ್ತಕದಲ್ಲಿ ಆಕೆ ಕನಸುಗಳಲ್ಲಿ ಕಂಡ ನೈಸರ್ಗಿಕ ದುರಂತಗಳ ಬಗ್ಗೆ ವಿವರಿಸಿದ್ದರೂ, ಅದರಲೊಂದು ಉದಾಹರಣೆ ಜುಲೈ 5ರಂದು ಜಪಾನ್ನಲ್ಲಿ ಭೀಕರ ಅವಘಡ ಸಂಭವಿಸಲಿದೆ . ಈ ಭವಿಷ್ಯವಾಣಿ ತಗ್ಗಿದರೂ – ಜುಲೈ 30ರಂದು ರಷ್ಯಾ ದ್ವೀಪದಲ್ಲಿ ಸಂಭವಿಸಿದ 8.8 ತೀವ್ರತೆಯ ಭೂಕಂಪನದಿಂದ ಜಪಾನ್ನಿಂದ ಅಮೆರಿಕದವರೆಗಿನ ಪ್ರದೇಶದಲ್ಲಿ ಭೀಕರ ಸುನಾಮಿ ಅಲೆಗಳು ಕಾಣಿಸಿಕೊಂಡವು. ಈ ಭೂಕಂಪನ ನಂತರ ಜಪಾನ್ ಹಾಗೂ ರಷ್ಯಾದಲ್ಲಿ ಹವಾಮಾನ ಎಚ್ಚರಿಕೆ ಘೋಷಿಸಲ್ಪಟ್ಟಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಯಿತು. ಬಾಬಾ ವಂಗಾ ಈ ಘಟನೆ ಬಗ್ಗೆ ಸಮುದ್ರ ಹೇಗೆ ಕುದಿಯುತ್ತದೆಯೆಂಬ ದೃಶ್ಯವನ್ನೂ ಭವಿಷ್ಯವಾಣಿ ವೇಳೆ ವಿವರಿಸಿದ್ದರು. ಇತ್ತೀಚೆಗೆ ನಿಜವಾದ ಈ ಘಟನೆಯಿಂದಾಗಿ, ಅವರ ನುಡಿಗಳಿಂದ ಇಡೀ ಜಗತ್ತೂ ಮತ್ತೆ ಬೆಚ್ಚಿ ಬಿದ್ದಂತಾಗಿದೆ.