
ಸಣ್ಣ ಮಕ್ಕಳಿಂದ ದೊಡ್ಡವರ ತನಕ ಹೃದಯಾಘಾತ ಸಂಭವಿಸುತ್ತಿದ್ದು. ಹಲವು ಅನಾರೋಗ್ಯ ಸಮಸ್ಯೆಗಳೂ ಕಂಡು ಬರುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಒತ್ತಡ. ಈಗಿನ ಸಂದರ್ಭಗಳಲ್ಲಿ ಸಣ್ಣ ಮಕ್ಕಳಿಂದ ದೊಡ್ಡವರ ವರೆಗೂ ಒತ್ತಡಗಳು ಕಂಡುಬರುತ್ತಿದ್ದು. ಒತ್ತಡವು ಮೊದಲನೆಯ ಕಾರಣವಾಗಿದೆ. ಅಪೌಷ್ಟಿಕತೆಯಿಂದ ಕೂಡಿದ ಆಹಾರದಿಂದ ಒತ್ತಡವನ್ನು ಸರಿದೂಗಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ನಮ್ಮ ಆಹಾರ ಪದ್ಧತಿಯಲ್ಲಿ ಜಂಕ್ ಫುಡ್, ಫಾಸ್ಟ್ ಫುಡ್ ಅಧಿಕವಾಗಿ ಉಪಯೋಗಿಸುತ್ತಿದ್ದೇವೆ. ಹಾಗೂ ಮನೆಯ ಆಹಾರ ಪದಾರ್ಥಗಳನ್ನು ಉಪಯೋಗಿಸಿಕೊಂಡರೂ ಕೂಡ ತರಕಾರಿ, ಹಣ್ಣು ಹಂಪಲುಗಳಲ್ಲಿ ರಾಸಾಯನಿಕ ವಸ್ತುವನ್ನು ಹೊಂದಿದ್ದರಿಂದ, ಆಹಾರ ಪದ್ಧತಿಯು ಅಪೌಷ್ಟಿಕತೆಯಿಂದ ಕೂಡಿದೆ. ಇದರಿಂದಾಗಿ ದೇಹದ ಅಂಗಾಂಗಗಳು ಬಲಹೀನತೆಗೊಳ್ಳುತ್ತಾ ಬರುತ್ತದೆ. ಹೊರಗಿನಿಂದ ಆರೋಗ್ಯವಾಗಿ ತೋರಿದರು ಕೂಡ ದೇಹದ ಒಳಗೆ ಆರೋಗ್ಯದಿಂದಿರಲು ಸಾಧ್ಯವಾಗುವುದಿಲ್ಲ. ಇದರಿಂದ ಅನಾರೋಗ್ಯ ಹಾಗೂ ಹೃದಯಾಘಾತ ಸಂಭವಿತ್ತಿದೆ. ಇದನ್ನು ತಡೆಗಟ್ಟಲು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು ಹಾಗೂ ತರಕಾರಿ ಹಾಗೂ ಹಣ್ಣ್ಣುಗಳನ್ನು ನಮ್ಮ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಬೆಳೆದು ಅದನ್ನು ಸೇವಿಸುವುದರಿಂದ ಆರೋಗ್ಯದಿಂದಿರಲು ಸಾಧ್ಯ.
ಹಿಂದಿನ ಕಾಲದ ಜನರು ಪದೇ-ಪದೇ ತಿಂಡಿ ತಿನಸುಗಳನ್ನು ತಿನ್ನುತ್ತಿರಲಿಲ್ಲ. ದಿನಕ್ಕೆ ಮೂರು ಬಾರಿ ಪೌಷ್ಟಿಕ ಆಹಾರವನ್ನು ಸೇವನೆ ಮಾಡುತ್ತಿದ್ದರು ಆದ್ದರಿಂದ ಆರೋಗ್ಯದಿಂದಿರಲು ಸಾಧ್ಯವಾಗುತಿತ್ತು.