
ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ನಿರ್ಮಿಸಿಕೊಳ್ಳಲು ಬಯಸುವ ಯುವಕರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 2026ನೇ ಸಾಲಿನ ಭರ್ಜರಿ ಅವಕಾಶವನ್ನು ಪ್ರಕಟಿಸಿದ್ದು, ತಾಂತ್ರಿಕ ಹಾಗೂ ಟ್ರೇಡ್ಸ್ಮನ್ ವಿಭಾಗದಲ್ಲಿ ಒಟ್ಟು 9,175 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯಲ್ಲಿ 9,096 ಪುರುಷರು ಮತ್ತು 79 ಮಹಿಳೆಯರಿಗೆ ಅವಕಾಶವಿದ್ದು, ಆಯ್ಕೆಯಾದವರಿಗೆ ಪೇ-ಲೆವೆಲ್ 3 ಅಡಿಯಲ್ಲಿ ₹21,700 ರಿಂದ ₹69,100ರವರೆಗೆ ವೇತನ ಹಾಗೂ ಇತರೆ ಕೇಂದ್ರ ಸರ್ಕಾರದ ಭತ್ಯೆಗಳು ದೊರೆಯಲಿವೆ. ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷವಾಗಿ 466 ಹುದ್ದೆಗಳು ಮೀಸಲಾಗಿದ್ದು, ಡ್ರೈವರ್, ಕುಕ್, ವಾಟರ್ ಕ್ಯಾರಿಯರ್, ಸಫಾಯಿ ಕರ್ಮಚಾರಿ ಸೇರಿದಂತೆ ವಿವಿಧ ಹುದ್ದೆಗಳು ಲಭ್ಯವಿವೆ. ನೇಮಕಾತಿಯಲ್ಲಿ ಚಾಲಕ ಹುದ್ದೆಗೆ ಅತಿ ಹೆಚ್ಚು 3,176 ಸ್ಥಾನಗಳಿದ್ದು, ಕುಕ್ (1,426), ಬಗ್ಲರ್ (1,263), ಸಫಾಯಿ ಕರ್ಮಚಾರಿ (547), ವಾಟರ್ ಕ್ಯಾರಿಯರ್ (502) ಸೇರಿದಂತೆ ಇತರ ವೃತ್ತಿಪರ ಹುದ್ದೆಗಳಿಗೂ ಅವಕಾಶ ಇದೆ. ಅರ್ಜಿ ಪ್ರಕ್ರಿಯೆ ಏಪ್ರಿಲ್ 20ರಿಂದ ಆರಂಭವಾಗಲಿದ್ದು, ಮೇ 19 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಅಧಿಕೃತ ವೆಬ್ಸೈಟ್ www.rect.crpf.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು; ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 011-26160255 ಸಂಪರ್ಕಿಸಲು ಸೂಚಿಸಲಾಗಿದೆ.





