
ಬೆಳ್ತಂಗಡಿ: 2022ರಲ್ಲಿ ಸಿದ್ದಪಡಿಸಿದ ಆಪತ್ ಮಿತ್ರ ಯೋಜನೆಗೆ ಮರುಜೀವ ಸಿಗುವ ನೀರೀಕ್ಷೆ ಮೂಡಿದ್ದು. 2022 ರ ಜೂನ್, ಜುಲೈನಲ್ಲಿ ಮೂರು ಹಂತದಲ್ಲಿ ಆಯ್ದ ೩೦೦ ಮಂದಿ ಸ್ವಯಂ ಸೇವಕರ ತಂಡವನ್ನು ರಚಿಸಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಆಪತ್ ಕಾಲಕ್ಕೆ ಸಹಾಯ ಹಸ್ತ ಚಾಚಲು ಆಧುನಿಕ ತಂತ್ರಜ್ಞಾನ ಆಧಾರಿತ ಸ್ಥಳ ಪ್ರಾತ್ಯಕ್ಷಿಕ ಸೇರಿದಂತೆ ತಜ್ಞರ ಮೂಲಕ ವಿಶೇಷ ತರಬೇತಿಯನ್ನು ಯುವ ಜನತೆಗೆ ನೀಡಲಾಗಿತ್ತು. ತರಬೇತಿ ಮುಗಿದು ಆರು ತಿಂಗಳು ನಂತರ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ನೀಡಲಾಗಿತ್ತು. ಇಷ್ಟನ್ನು ಮಾಡಿದ್ದು ಬಿಟ್ಟರೆ ನಂತರ ಯೋಜನೆಯು ನನೆಗುದಿಗೆ ಬಿದ್ದಿತ್ತು. ಆದರೆ ತರಬೇತಿ ಪಡೆದ ಸ್ವಯಂ ಸೇವಕರು ಅನೇಕ ಕಡೆಗಳಲ್ಲಿ ಅಪಘಾತ, ನೆರೆ, ಕಾಡ್ಗಿಚ್ಚು ಹಾಗೂ ಪ್ರಾಕೃತಿಕ ವಿಕೋಪಗಳ ಸಂದರ್ಭ ಸಹಾಯಹಸ್ತ ಚಾಚುವುದನ್ನು ನಿಲ್ಲಿಸಿಲ್ಲ. ಇವರಿಗೆ ತರಬೇತಿ ನೀಡಿದ ಬಳಿಕ ಹೆಚ್ಚಿನ ಯಾವುದೇ ಪ್ರಕ್ರಿಯೆಗಳು ಸರಕಾರದ ಕಡೆಯಿಂದ ನಡೆದಿರಲಿಲ್ಲ. ಆದರೂ ಈ ಸದಸ್ಯರು ಇಂದಿನವರೆಗೂ ಅಗತ್ಯ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗುತ್ತಿರುವುದು ಶ್ಲಾಘನೀಯ.
ಮಳೆ ಮತ್ತು ಪ್ರಾಕೃತಿಕ ವಿಕೋಪವನ್ನು ಎದುರಿಸಲು ಸರ್ಕಾರ ಆಪತ್ ಮಿತ್ರ ಯೋಜನೆಗೆ ಇದೀಗ ಮರು ಜೀವ ನೀಡುವಂತಿದೆ. 2022ರಲ್ಲಿ ತರಬೇತಿ ನೀಡಿದ್ದರೂ ರಕ್ಷಣಾ ಕಿಟ್ ನೀಡಿರಲಿಲ್ಲ ಆದರೆ ಇದೀಗ ರಕ್ಷಣಾ ಕಿಟ್ ಒದಗಿಸುವ ಭರವಸೆ ನೀಡಲಾಗಿದೆ. ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣೆ ಯೋಜನೆ ಮಾದರಿಯಾಗಿದೆ. ಶೌರ್ಯ ತಂಡವು ಸ್ವಯಂ ಸೇವಕರನ್ನು ಒಳಗೊಂಡಿದ್ದು. ಜಿಲ್ಲಾಧಿಕಾರಿ ಕಛೇರಿಯಲ್ಲಿ ಆನ್ಲೈನ್ ಮೀಟಿಂಗ್ ನಡೆದಿದೆ. ಶೀಘ್ರದಲ್ಲಿ ಕಿಟ್ ದೊರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಕಾರ್ಯಕ್ಕೆ ಅನುಕೂಲವಾಗಲಿದೆ. ಇಂದು ಇನ್ನೊಂದು ಹಂತದ ಸಭೆ ಜರುಗಲಿದ್ದು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದ್ದಾರೆ ಮುನೇಶ್ ಮುಗ್ದಿಲ್, ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ.