
ಸಾಗರ: ಆನಂದ ಪುರ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದ ಪಿಎಸ್ಐ ಪ್ರವೀಣ್ ಈಗಾಗಲೇ ಅಪರಾಧಿಗಳ ಭೇಟೆ ಶುರುಮಾಡಿದ್ದಾರೆ. ಸಾಗರ ತಾಲ್ಲೂಕಿನ ಆನಂದಪುರದ ಪಿಎಸ್ಐ ಪ್ರವೀಣ್ ನೇತೃತ್ವದ ತಂಡ ಆನಂದಪುರ ಪೋಲಿಸ್ ಠಾಣೆಯ ಎದುರು ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ ಸಾಗರ ಕಡೆಯಿಂದ ಲಾರಿಯೊಂದು ಅಡ್ಡದಿಡ್ಡಲಾಗಿ ಓಡಿಸಿಕೊಂಡು ಬರುವುದನ್ನು ಗಮನಿಸಿದ ಪೋಲಿಸರ ತಂಡ ಲಾರಿಯನ್ನು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ ಆದರೆ ಲಾರಿ ಚಾಲಕ ಯಾವುದೋ ಮತ್ತಿನಲ್ಲಿರುವುದು ಪೋಲಿಸರಿಗೆ ತಿಳಿದು ಬಂದಿದ್ದ ಕಾರಣ ಆತನನ್ನು ಅಲ್ಲಿಂದ ತಕ್ಷಣ ಆನಂದಪುರ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಿದ್ದಾರೆ. ಆಗ ಆತ ಗಾಂಜಾ ಸೇವಿಸಿದ್ದ ಎಂದು ತಿಳಿದು ಬಂದಿದೆ. ಲಾರಿ ಚಾಲಕ ಬೆಳ್ತಂಗಡಿ ತಾಲ್ಲೂಕಿನ 25ವರ್ಷದ ಯುವಕನಾಗಿದ್ದು ಈತನ ಮೇಲೆ ಎನ್.ಡಿ.ಪಿ ಆಕ್ಟ ಅಡಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.ಮುಂದಿನ ದಿನಗಳಲ್ಲಿ ಆನಂದಪುರ ಸುತ್ತಮುತ್ತಲಿನ ಗಾಂಜಾ ವ್ಯಸನಿಗಳ ಮೇಲೆ ಹೆಚ್ಚಿನ ನಿಗಾ ವಹಿಸಿರುವ ಮಾಹಿತಿ ತಿಳಿದು ಬಂದಿದೆ.