
ಆಲ್ದೂರು: ಆಲ್ದೂರು ಸಮೀಪದ ಐದಳ್ಳಿ ಗ್ರಾಮದಲ್ಲಿ ನೆನ್ನೆ ರಾತ್ರಿ ಐಬಿ ಮಂಜುನಾಥ್ ಇವರ ತೋಟದಲ್ಲಿ ಕಾಡಾನೆ ಬಾಳೆ, ತೆಂಗು, ಕಾಫಿ ಗಿಡಗಳನ್ನು ನಾಶ ಮಾಡಿದೆ. ಅರೆನೂರು ಹಕ್ಕಿಮಕ್ಕಿ ಐದಳ್ಳಿ ಬೆಟ್ಟದಲ್ಲಿ ನರುಡಿ ಗ್ರಾಮಗಳಲ್ಲಿ ನಿರಂತರವಾಗಿ ಆನೆಯ ಉಪಟಳ ನಡೆಯುತ್ತಿದ್ದು. ತೋಟಗಳನ್ನು ಹಾಳುಮಾಡಿ, ಬೆಳೆಗಳಿಗೂ ಹಾನಿ ಉಂಟುಮಾಡುತ್ತಿವೆ. ಜನ ಸಾಮಾನ್ಯರು, ಶಾಲೆಗೆ ಹೋಗುವ ಮಕ್ಕಳಿಗೆ ತಿರುಗಾಡುವುದು ಕಷ್ಟಕರವಾಗಿದೆ. ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಸಚಿವರು ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸನ್ಮಿತ್ ಐದಳ್ಳಿ ಇವರು ಮನವಿ ಮಾಡಿದ್ದಾರೆ.