
ಅಹಮದಾಬಾದ್: ಇಂದು ಬೆಳಗ್ಗೆ ಅಹಮದಾಬಾದ್ನಲ್ಲಿರುವ ಜಗನ್ನಾಥ ದೇವಸ್ಥಾನದ ರಥಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ನಗರದ ಖಾದಿಯಾ ಪ್ರದೇಶದ ಮೂಲಕ ಸಂಚರಿತ್ತಿದ್ದಾಗ ಒಂದು ಆನೆ ಇದ್ದಕ್ಕಿದಂತಯೆ ಅಡ್ಡದಿಡ್ಡಿಯಾಗಿ ಓಡಲು ಆರಂಭಿಸಿದ್ದು. ಇದರ ಜೊತೆಗಿದ್ದ ಎರಡು ಆನೆಗಳೂ ಕೂಡಾ ಓಡಲಾರಂಭಿಸಿದೆ ಈ ಸಮಯದಲ್ಲಿ ಸೇರಿದ ಭಕ್ತಸಮೂಹವು ಜೀವ ಭಯದಿಂದ ಓಡಿದ ವೇಳೆಯಲ್ಲಿ ಇಬ್ಬರು ಬಿದ್ದು ಗಾಯಗೊಂಡಿದ್ದರು. ನಂತರ ಆನೆಗಳನ್ನು ನಿಯಂತ್ರಿಸುವಲ್ಲಿ ಮಾವುಕರು ಯಶಸ್ವಿಯಾದರು.