
ಆಗುಂಬೆ: ಕಾಡಾನೆಯ ಉಪಟಳ ಮುಂದುವರೆದಿದ್ದು, ಇದೀಗ ಕಾಡಾನೆಯು ಬಿದರಗೋಡು ಗ್ರಾಮ ಪಂಚಾಯಿತಿ ಹಾಗೂ ಆಗುಂಬೆ ಗ್ರಾಮ ಪಂಚಾಯಿತಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಗಜರಾಜ ಓಡಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಆಗಸರಕೋಣೆ, ಕಾರೆಕುಂಬ್ರಿ, ಜಡ್ಡು, ಮಳಲಿ, ತಲ್ಲೂರು, ಆಗುಂಬೆ, ಉಳುವಾಡಿ, ಸುತ್ತ ಮುತ್ತಲಿನ ಪ್ರದೇಶದಲ್ಲಿ ಗ್ರಾಮಸ್ಥರು ಜಾಗರೂಕತೆಯಿಂದ ಇರಬೇಕೆಂದು ಅರಣ್ಯ ಇಲಾಖೆಯು ಪ್ರಕಟಣೆ ನೀಡಿದೆ. ಶಾಲಾ ಮಕ್ಕಳು, ಸಾರ್ವಜನಿಕರು, ವೃದ್ಧರು ಅನಾವಶ್ಯಕವಾಗಿ ಸಂಚರಿಸಬಾರದು ಹಾಗೂ ಜಾಗರೂಕತೆಯಿಂದ ಇರಬೇಕೆಂದು ತಿಳಿಸಿದ್ದಾರೆ. ಗ್ರಾಮಸ್ಥರು ಸಹಕರಿಸಬೇಕಾಗಿ ತಿಳಿಸಿದ್ದಾರೆ.