
ಆಗುಂಬೆ: ಬಾಲಕನೊಬ್ಬ ಕಾಣೆಯಾಗಿರುವ ಪ್ರಕ್ರಿಯೆಯು ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ನಡೆದಿದೆ. ಬಾಲಕನನ್ನು ದರ್ಶನ್ ಬಿನ್ ವಿಜಯ್ ಎಂದು ಗುರುತಿಸಲಾಗಿದ್ದು, ದರ್ಶನ್(14) ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದ. ಬಾಲಕನು ಶಾಲೆಯ ಹಾಸ್ಟೆಲ್ನಲ್ಲಿ ಇರುತ್ತಿದ್ದು ಈತ ಆಗಸ್ಟ್ 18ರಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಪೋಲಿಸ್ ಠಾಣೆಗೆ ದೂರು ನೀಡಿದ್ದರೂ ಸಹ ಇಲ್ಲಿಯ ತನಕ ದರ್ಶನ್ನ ಸುಳಿವು ಸಿಕ್ಕಿಲ್ಲ ಎಂದು ಪೋಲಿಸ್ ಇಲಾಖೆ ತಿಳಿಸಿದೆ. ಬಾಲಕನು ಕನ್ನಡ ಹಾಗೂ ತಮಿಳು ಭಾಷೆಯನ್ನು ಮಾತನಾಡುತ್ತಿದ್ದ ಎಂದು ತಿಳಿದು ಬಂದಿದೆ. ಹೊರಹೋಗುವ ಸಂದರ್ಭದಲ್ಲಿ ಗ್ರೇ ಬಣ್ಣದ ಅರ್ಧ ತೋಳಿನ ಅಂಗಿ, ಜರ್ಕಿನ್, ನೀಲಿ ಬಣ್ಣದ ಪ್ಯಾಂಟ್, ಬಿಳಿ ಚಪ್ಪಲಿ ಹಾಗೂ ಆಕಾಶ ನೀಲಿ ಬಣ್ಣದ ಬ್ಯಾಗ್ ಹಾಕಿಕೊಂಡಿದ್ದ ಎನ್ನಲಾಗಿದೆ.
ಬಾಲಕನು ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಬಣ್ಣ ಹೊಂದಿದ್ದು, 4.6 ಅಡಿ ಎತ್ತರವಿದ್ದಾನೆ ಹಾಗೂ ಎಡ ಪಕ್ಕೆಯಲ್ಲಿ ಕಪ್ಪು ಮಚ್ಚೆ ಹೊಂದಿದ್ದಾನೆ.
ಬಾಲಕನ ಸುಳಿವು ದೊರೆತಲ್ಲಿ ಶಿವಮೊಗ್ಗ ಎಸ್.ಪಿ ಕಛೇರಿ 08182-261400, ತೀರ್ಥಹಳ್ಳಿ ಡಿವೈಎಸ್ಪಿ 08181-220388, ಮಾಳೂರು ಸಿಪಿಐ 9880803333 ಹಾಗೂ ಆಗುಂಬೆ ಪಿಎಸ್ಐ 9480803314 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಇಲಾಖೆಯು ಆಗಸ್ಟ್ 20ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.