ಚಾಮರಾಜನಗರ: ತಾಲೂಕು ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಶೇಕಡ 100,ಕಲಾ ವಿಭಾಗದಲ್ಲಿ ಶೇಕಡ 80 ಫಲಿತಾಂಶ ಬಂದಿದೆ. ಅತ್ಯುನ್ನತ ಶ್ರೇಣಿಯಲ್ಲಿ ಶೀಲಾ 600 ಕ್ಕೆ 575, (95.83), ನಾಗಲಾಂಬಿಕೆ 537 (89.50 )ರಕ್ಷಿತ್ 512,( ಶೆ 85.33)ಅಂಕ ಪಡೆದಿರುತ್ತಾರೆ. 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಉತ್ತೀರ್ಣರಾದ ಎಲ್ಲರಿಗೂ ಅಭಿನಂದನೆಗಳನ್ನು ಪ್ರಾಚಾರ್ಯರು ಉಪನ್ಯಾಸಕರು, ಗ್ರಾಮಸ್ಥರು, ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಭಿನಂದಿಸಿದೆ.
