
ಶಿವಮೊಗ್ಗ: ರೈಲಿನ ಭೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗ ನಗರದ ತುಂಗಾ ಸೇತುವೆಯ ಮೇಲೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಕಂಡು ಬಂದಿಲ್ಲ. ತಾಳಗುಪ್ಪ – ಮೈಸೂರು ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಸಂಜೆ ೫ ಗಂಟೆಗೆ ಶಿವಮೊಗ್ಗ ರೈಲು ನಿಲ್ದಾಣದಿಂದ ಹೊರಟಿದ್ದು ಮಾರ್ಗ ಮಧ್ಯ ರೈಲಿನ ಭೋಗಿಗಳು ಬೇರ್ಪಟ್ಟಿದೆ. ತುಂಗಾ ನದಿ ಸೇತುವೆ ಮೇಲೆ ರೈಲು ಸಂಚಾರವಾಗುವ ವೇಳೆಯಲ್ಲಿ ಎರಡು ಭೋಗಿಗಳ ಕ್ಲಿಪ್ಪಿಂಗ್ ಲಾಕ್ ತುಂಡಾಗಿದ್ದು, ಇಂಜಿನ್ ಹಾಗೂ ಉಳಿದ ಭೋಗಿಗಳು ಸೇತುವೆ ಮೇಲೆ ಉಳಿದಿದೆ. ಆದ್ದರಿಂದ ಪ್ರಯಾಣಿಕರನ್ನು ಇಳಿಸಲು ಸಾಧ್ಯವಾಗಲಿಲ್ಲ. ರೈಲ್ವೆ ಇಂಜಿನೀಯರಿಂಗ್ ತಂಡ, ಗ್ಯಾರೇಜ್ ಮತ್ತು ಮೆಕಾನಿಕ್ ತಂಡ ಘಟನಾ ಸ್ಥಳಕ್ಕೆ ಬಂದು ಲಾಕ್ ಸರಿಪಡಿಸಿದ್ದಾರೆ. ತದನಂತರ ರೈಲು ಮೈಸೂರಿಗೆ ಹೊರಟಿದ್ದು, ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ತಲುಪಿದೆ ಎಂದು ತಿಳಿದು ಬಂದಿದೆ.