
ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿ ಇಂದು ಬೆಳಗಿನ ಜಾವ ಕರಡಿ ಸಂಚರಿಸಿದ್ದು, ನಗರದ ಮುಖ್ಯ ರಸ್ತೆಗಳಲ್ಲಿ ಓಡಾಡಿದ ಈ ಕರಡಿ ಶಂಕರಪುರ, ಎಂಜಿ ರಸ್ತೆ ಹಾಗೂ ಗುರುನಾಥ ಸರ್ಕಲ್ ಮಾರ್ಗವಾಗಿ ಮಿಲನ್ ಥಿಯೇಟರ್ ಕಡೆಗೆ ಸಾಗಿರುವುದು ಸ್ಥಳೀಯರ ಮೊಬೈಲ್ಗಳಲ್ಲಿ ಸೆರೆಯಾಗಿದೆ. ಕರಡಿಯನ್ನು ಹಿಂಬಾಲಿಸಿ ಕೆಲ ಸ್ಥಳೀಯರು, ವಿಶೇಷವಾಗಿ ಬೈಕ್ ಸವಾರರು ವಿಡಿಯೋ ತೆಗೆಯಲು ಪ್ರಯತ್ನಿಸಿದರೆ, ಸರ್ಕಾರಿ ಬಸ್ ನಿಲ್ದಾಣದ ಬಳಿ ಒಬ್ಬ ಯುವಕ ಕರಡಿಯನ್ನು ಹಿಡಿಯಲು ಒಡಿದ್ದಾರೆ. ಆದರೆ ಯುವಕ ಓಡುತ್ತಿದ್ದಂತೆ ಕರಡಿ ಮಿಲನ್ ಥಿಯೇಟರ್ ಸಮೀಪ ಕತ್ತಲಲ್ಲಿ ಕಣ್ಮರೆಯಾಗಿದ್ದು, ನಗರದ ಮಧ್ಯ ಭಾಗದಲ್ಲೇ ಕರಡಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕರಡಿಯನ್ನು ತಕ್ಷಣ ಸೆರೆಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.





