
ರೈತರು ಹಾಗೂ ಗ್ರಾಮೀಣ ಯುವಕರಿಗೆ ವಧುಗಳ ಕೊರತೆ ತೀವ್ರವಾಗಿರುವ ಹಿನ್ನೆಲೆ, ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು, ಕೃಷಿಯಲ್ಲಿ ತೊಡಗಿರುವ ಯುವಕರನ್ನು ಮದುವೆಯಾಗಲು ಹೆಣ್ಣುಮಕ್ಕಳು ಮುಂದೆ ಬರದ ಕಾರಣ ಮೂವತ್ತು ವರ್ಷ ದಾಟಿದರೂ ಅನೇಕರು ವಿವಾಹವಾಗದೇ ಉಳಿಯುತ್ತಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗಮನಕ್ಕೆ ತಂದಿದ್ದಾರೆ. ತಮ್ಮ ಕ್ಷೇತ್ರ ಗ್ರಾಮೀಣ ಪ್ರದೇಶವಾಗಿದ್ದು ವ್ಯವಸಾಯ ಅವಲಂಬನೆ ಹೆಚ್ಚಿರುವುದರಿಂದ ಈ ಸಮಸ್ಯೆ ಗಂಭೀರವಾಗಿದ್ದು, ಕೃಷಿಕರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ವಿಶೇಷ ಭತ್ಯೆ ಹಾಗೂ ಗೌರವ ಸ್ಥಾನಮಾನ ಘೋಷಿಸುವ ಯೋಜನೆಯನ್ನು ಮುಂಬರುವ ಅಧಿವೇಶನದಲ್ಲಿ ಜಾರಿಗೆ ತರಬೇಕೆಂದು ಅವರು ಮನವಿ ಮಾಡಿದ್ದಾರೆ, ಇದೇ ವಿಚಾರವನ್ನು ಹಿಂದೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಕೂಡ ಪ್ರಸ್ತಾಪಿಸಿ ರೈತ ಹಾಗೂ ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವ ಮಹಿಳೆಯರಿಗೆ 10 ಲಕ್ಷ ಠೇವಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು.




