ಸಾಗರ: ಅತಿ ದೊಡ್ಡ ಗ್ರಾಮ ಪಂಚಾಯತ್ ಗಳಲ್ಲಿ ಒಂದಾದ ಸಾಗರ ತಾಲ್ಲೂಕಿನ ತಲವಾಟ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲವಾಟ ಗ್ರಾಮದಲ್ಲಿ ಕಳೆದ ಸುಮಾರು ಮೂರು ವರ್ಷದಿಂದ ಯಾವುದೇ ತರಹದ ಊರಿನ ಹೆಸರು ಇರುವ ಬೋರ್ಡ್ ಇಲ್ಲದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಹಲವು ಭಾರಿ ಗ್ರಾಮ ಪಂಚಾಯತ್ ಗೆ ಹಾಗೂ ಗ್ರಾಮದ ಜನ ಪ್ರತಿನಿಧಿಯಾದ ಶ್ರೀಮತಿ ಕಲ್ಪನಾ ಸತೀಶ್ ರವರಿಗೆ ಮೌಖಿಕವಾಗಿ ಹಲವು ಭಾರಿ ಗಮನಕ್ಕೆ ತಂದರೂ, ಈ ಮೂರು ವರ್ಷದಲ್ಲಿ ಯಾವುದೇ ತರಹದ ಊರಿನ ಹೆಸರಿನ ಬೋರ್ಡ್ ಹಾಕದೇ ಇರುವುದರಿಂದ ಬಸ್ ನಿಲುಗಡೆಗೆ ಮತ್ತು ಊರಿಗೆ ಬರುವ ಊರಿನ ನಿವಾಸಿಗಳ ಬಂಧು ಮಿತ್ರರಿಗೆ ಊರನ್ನು ಹುಡುಕುವುದೇ ಅತ್ಯಂತ ಕಷ್ಟದ ಕೆಲಸವಾಗಿದೆ. ಹಲವು ಬಾರಿ ಗ್ರಾಮಪಂಚಾಯತ್ ಸದಸ್ಯೆ ಶ್ರೀಮತಿ ಕಲ್ಪನಾ ಸತೀಶ್ ರಲ್ಲಿ ವಿಚಾರಿಸಿದಾಗ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಈ ಊರಿನ ಹೆಸರಿನ ಬೋರ್ಡ್ ಹಾಕುವ ಅಧಿಕಾರ ಅಥವಾ ಅದಕ್ಕೆ ಪೂರಕವಾದ ಅನುಧಾನ ಇಲ್ಲದಿರುವುದು ಹಾಗೂ ಇದು ಪಿ ಡಬ್ಲ್ಯೂ ಡಿ ಅಧಿಕಾರದ ವ್ಯಾಪ್ತಿಗೆ ಬೋರ್ಡ್ ಹಾಕುವ ಅಧಿಕಾರ ಇದೆ ಎಂದು ಅವರು ತಿಳಿಸಿದ್ದು, ಸರಕಾರ ಒಂದು ಊರಿನ ಬೋರ್ಡ್ ಹಾಕುವ ಸಾಮರ್ಥ್ಯ ಕೂಡ ಗ್ರಾಮ ಪಂಚಾಯತ್ ವ್ಯಾಪ್ತಿ ಇಂದ ಕಿತ್ತುಕೊಂಡಿರುವುದು ಹಾಗೂ ಅದಕ್ಕೆ ಅನುಧಾನ ಕಡಿತ ಮಾಡಿರುವುದು ಅತ್ಯಂತ ಶೋಚನೀಯ ವಿಷಯವಾಗಿದೆ. ಇದಕ್ಕೆ ಊರಿನ ಗ್ರಾಮಸ್ಥರು ಅತ್ಯಂತ ಸೂಕ್ತ ಸಮಯದಲ್ಲಿ ಪ್ರತಿಭಟಿಸಿ, ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ದಿನಾಂಕ 12 ಜನವರಿ 2026ರಂದು ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯತ್ P D O ರಮ್ಯಾ ಅವರ ಮೊಬೈಲ್ ನಂಬರ್ ಗೆ ಕರೆ ಮಾಡಿ ಊರಿನ ಬೋರ್ಡ್ ಬಗ್ಗೆ ವಿಚಾರಿಸಿದಾಗ, ಮೊದಲು ಅರ್ಜಿ ಕೊಡಬೇಕು ಅನಂತರ ಆ ಅರ್ಜಿ ಅನ್ನು ಪಿ ಡಬ್ಲ್ಯೂ ಡಿ ಗೆ ತಿಳಿಸುವುದಾಗಿ ಹೇಳಿ, ಅರ್ಜಿ ಇಲ್ಲದೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ತಿಳಿಸಿ, ಅತ್ಯಂತ ಕಟುವಾಗಿ ಮಾತಾಡಿ ಮೊಬೈಲ್ ಅನ್ನು ಕಡಿತಗೊಳಿಸಿದ್ದು, ಒಂದು ಊರಿನ ಚಿಕ್ಕ ಸಮಸ್ಯೆಗೂ ಅರ್ಜಿ ಕೊಡುವ ಇಂತಹ ವ್ಯವಸ್ಥೆ ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ . ಮೇಲಾಗಿ ಊರಿನ ಸಮಸ್ಯೆ ಬಗ್ಗೆ P D O ಗೆ ಖುದ್ದು ಮಾಹಿತಿ ಇರಬೇಕೆ ಹೊರತು, ಪ್ರತಿ ಸಮಸ್ಯೆಗೆ ಅರ್ಜಿ ಕೇಳುವ ವ್ಯವಸ್ಥೆ ಇರಬಾರದು. ಇಂತಹ ಧುರಹಂಕಾರದ P D O ಅವರನ್ನು ಕೂಡಲೇ ಅಮಾನತು ಮಾಡಿ, ಊರಿನ ಬೋರ್ಡ್ ನಂತಹ ಚಿಕ್ಕ ಸಮಸ್ಯೆಗೆ ಪರಿಹಾರ ಇರದ ಗ್ರಾಮ ಪಂಚಾಯತ್ ಗೆ ಹಾಗು P D O ಗೆ , ಇನ್ನು ಊರಿನ ಇತರೆ ಅಭಿವೃದ್ಧಿ ಬಗ್ಗೆ ಯಾವುದೇ ಪರಿಹಾರ ಮತ್ತು ಸಲಹೆ ಕೇಳುವುದೇ ವ್ಯರ್ಥ ಎಂದು ತಕ್ಷಣವೇ ತಲವಾಟ ಗ್ರಾಮಕ್ಕೆ ತಲವಾಟ ಹೆಸರಿನ ಬೋರ್ಡ್ ಅನ್ನು ತ್ವರಿತವಾಗಿ ಹಾಕಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
