ಶೃಂಗೇರಿ: ಮೆಣಸೆ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಮತ್ತು NRLM ಸಂಜೀವಿನಿ ಯೋಜನೆಯ ಆರ್ಥಿಕ ಸೇರ್ಪಡೆ ಕಾರ್ಯಕ್ರಮದಡಿ ‘ಆಜಾಧಿ ಕಾ ಅಮೃತ ಮಹೋತ್ಸವ’ ಅಡಿಯಲ್ಲಿ ಭಾರತ ಸರ್ಕಾರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾರ್ಗಸೂಚಿಯಂತೆ ‘ಹಣಕಾಸು ಸಾಕ್ಷರತೆ ಮತ್ತು ಸೇವಾ ವಿತರಣ/ಸಕ್ಷಮ್ ಕೇಂದ್ರ’ ವನ್ನು ಉದ್ಘಾಟಿಸಲಾಯಿತು. ಈ ಕೇಂದ್ರದ ಉದ್ದೇಶ ಸ್ವ ಸಹಾಯ ಸಂಘದ ಸದಸ್ಯರಿಗೆ ಹಣಕಾಸು ಸಾಕ್ಷರತೆ ಒದಗಿಸುವುದು ಹಾಗೂ ಆರ್ಥಿಕ ಸೇವೆಗಳನ್ನು ಸುಲಭವಾಗಿ ತಲುಪಿಸುವುದಾಗಿದ್ದು, ಆರ್ಥಿಕ ಸಲಹೆ ಮತ್ತು ಕುಂದು ಪರಿಹಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಉದ್ಘಾಟನಾ ಕಾರ್ಯಕ್ರಮವನ್ನು ಹೊಸ ವರ್ಷದಂದು ಮೆಣಸೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶೃಂಗೇರಿ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷರಾದ ಸುಭಾಷಿಣಿ ತಿಮ್ಮಪ್ಪ ಹೆಗ್ಡೆ ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಿದ್ದು, ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಶ್ರೀಯುತ ಸುದೀಪ್ ಹೆಚ್, ಮೆಣಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯಕ್, ಸದಸ್ಯರು ಅಜಿತ್ ಶೆಟ್ಟಿ, ತ್ರಿಮೂರ್ತಿ, ಸುಷ್ಮಾ, ಸುಮಲತಾ, ಶಾಮಣ್ಣ, ರಾಜಣ್ಣ, ಕವಿತಾ, ಸವಿತಾಶಿವಶಂಕರ್, ಪಿಡಿಓ ಉಪೇಂದ್ರ ಸರ್, GPLF ಪದಾಧಿಕಾರಿಗಳು ಶಾಂತ ಶ್ರೀನಿವಾಸ್, ಪ್ರಮೀಳ ರಮೇಶ್, ಸುನೀತಾ ಪ್ರಭು, ಭಾರತಿ ನಾರಾಯಣ ಮೂರ್ತಿ, ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ ಆದರ್ಶ್, ಸುಪ್ರಿತಾ ಅಂಜನ್, ಚೈತ್ರ ಭರತ್, ಪವಿತ್ರ, ಮಧುರ, STLF ಪದಾಧಿಕಾರಿಗಳು ಸುಮಿತ್ರ ಸೋಮಶೇಖರ್, ಶೈಲಾವತಿ, ದೇವಮ್ಮ ಮತ್ತು ಮೆಣಸೆ GPLF MBK, LCRP, KS, PS, FLCRP ಸದಸ್ಯರು ಹಾಜರಿದ್ದರು.
