ಕರ್ನಾಟಕ ಸರ್ಕಾರ ರಾಜ್ಯದ 4 ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಸೇರಿಸಿ ಒಟ್ಟು 22 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಬದಲಾಯಿಸಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚಿಕ್ಕಬಳ್ಳಾಪುರ ಡಿಸಿ ರವೀಂದ್ರ ಪಿ.ಎನ್. ಅವರನ್ನು ಪೌರಾಡಳಿತ ನಿರ್ದೇಶಕರಾಗಿ ವರ್ಗಾಯಿಸಿ, ಅವರ ಸ್ಥಾನಕ್ಕೆ ಪ್ರಭು ಜಿ. ಅವರನ್ನು ನೇಮಿಸಲಾಗಿದ್ದು, ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರನ್ನು ಕಂದಾಯ ಆಯುಕ್ತರನ್ನಾಗಿ ಹಾಗೂ ಅವರ ಸ್ಥಾನಕ್ಕೆ ನಾಗರಾಜ ಎನ್.ಎಂ. ಅವರನ್ನು ನೇಮಕ ಮಾಡಲಾಗಿದೆ. ಶಿವಮೊಗ್ಗ ಡಿಸಿ ಗುರುದತ್ ಹೆಗಡೆ ಮತ್ತು ಚಾಮರಾಜನಗರ ಡಿಸಿ ಶಿಲ್ಪಾ ನಾಗ್ ಅವರನ್ನು ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಒಟ್ಟು 12 ಐಎಎಸ್ ಅಧಿಕಾರಿಗಳ ಹುದ್ದೆಗಳಲ್ಲಿ ಬದಲಾವಣೆ ಆಗಿದ್ದು, 10 ಮಂದಿಗೆ ಹುದ್ದೆ ನಿಯೋಜನೆ ಮಾಡಿಲ್ಲ ಎಂದು ತಿಳಿಸಿದೆ.
