ಶೃಂಗೇರಿ : ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ‘ದಿಟ್ಟ’ ಕ್ರಮದಿಂದಾಗಿ ಶೃಂಗೇರಿಯಲ್ಲಿ ಪಾರ್ಕಿಂಗ್ ಪರದಾಟ ಆರಂಭವಾಗಿ ಪ್ರವಾಸಿಗರು ಪರಿತಪಿಸುವಂತಾಗಿದೆ. ಈ ಹಿಂದೆ ಪಟ್ಟಣ ಪಂಚಾಯತ್ ಅಧೀನದಲ್ಲಿದ್ದ ಶೃಂಗೇರಿ ಗಾಂಧೀ ಮೈದಾನದ ಪಾರ್ಕಿಂಗ್ ವ್ಯವಸ್ಥೆಯನ್ನು ರಾಜಕೀಯ ಪ್ರೇರಿತವಾಗಿ ಜಿಲ್ಲಾಡಳಿತ ನಿಷೇಧಿಸಿತು. ಇದೀಗ ಉಚಿತ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ವಾಹನ ಸವಾವರರು ಬೇಕಾಬಿಟ್ಟಿ ಎಲ್ಲೆಂದರಲ್ಲಿ ತಮ್ಮ ವಾಹನ ನಿಲ್ಲಿಸಿ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಪೊಲೀಸ್ ಇಲಾಖೆ ಹೈರಾಣಾಗುತ್ತಿದೆ. ಇದೀಗ ಕ್ರಿಸ್ಮಸ್ ,ವಾರಾಂತ್ಯ , ಅಯ್ಯಪ್ಪ ಮಾಲಾಧಾರಿಗಳು, ಶಾಲಾ ಪ್ರಾವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ವಿಪರೀತ ವಾಹನ ದಟ್ಟಣೆ ಉಂಟಾಗಿ ಪ್ರಯಾಣಿಕರು ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
