ಲವಂಗ: ಇದೊಂದು ಕಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರು ಪದಾರ್ಥ. ಅನೇಕ ವಿಧದಲ್ಲಿ ಉಪಯೋಗಿಸುವ ಲವಂಗ ಮೂಲತಃ ಇಂಡೋನೇಷ್ಯಾದ್ದಾಗಿದ್ದು, ಅಲ್ಲಿ ಈಗಲೂ ಕಾಡುಮರವಾಗಿ ಕಂಡು ಬರುತ್ತದೆ. ಸಾಮಾನ್ಯವಾಗಿ ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ 1-2 ಲವಂಗಗಳನ್ನು ಅಗಿಯುವುದು ಬಹುತೇಕ ಕುಟುಂಬಗಳಲ್ಲಿ ಇನ್ನೂ ಅನುಸರಿಸುತ್ತಿದ್ದು, ತಜ್ಞರ ಪ್ರಕಾರ ಬಿಸಿ ನೀರಿನಲ್ಲಿ ಲವಂಗ ಹಾಕಿ ಕುಡಿಯುವುದರಿಂದ ಶೀತ-ಕೆಮ್ಮಿನ ತೀವ್ರತೆ ಕಡಿಮೆಯಾಗುತ್ತದೆ. ಹಲ್ಲು ನೋವು ಬಂದಾಗ ಲವಂಗದ ಎಣ್ಣೆಯನ್ನು ಕಾಟನ್ ಮೂಲಕ ಹೊರಗಡೆ ಹಚ್ಚುವುದರಿಂದ ತಾತ್ಕಾಲಿಕ ಆರಾಮ ನೀಡುತ್ತದೆಯೆಂದು ತಿಳಿಸಲಾಗಿದೆ. ಜೀರ್ಣ ಸಮಸ್ಯೆಗಳಿಗೂ ಊಟದ ನಂತರ ಲವಂಗ ಸೇವನೆ ಸಹಾಯಕವಾಗಿದೆ ಟೂತ್ ಪೇಸ್ಟ್, ಮೌತ್ವಾಶ್ ಮತ್ತು ಸುಗಂಧ ದ್ರವ್ಯಗಳಲ್ಲಿ ಕೂಡ ಈ ಲವಂಗ ತುಂಬಾ ಮುಖ್ಯಪಾತ್ರ ವಹಿಸುತ್ತದೆ.
