ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು ಸಂಜೆ ಭಾರತಕ್ಕೆ ಆಗಮಿಸಿ, ಪ್ರಧಾನಿ ಮೋದಿಯವರ ನಿವಾಸದಲ್ಲಿ ನಡೆಯುವ ಔತಣ ಕೂಟದಲ್ಲಿ ಭಾಗವಹಿಸಲಿದ್ದಾರೆ. ಶುಕ್ರವಾರ ಅವರು ರಾಷ್ಟ್ರಪತಿ ಭವನದಲ್ಲಿ ಸಭೆ ನಡೆಸಿ, ರಾಜ್ಘಾಟ್ಗೆ ಭೇಟಿ ನೀಡಿದ ನಂತರ ಹೈದರಾಬಾದ್ ಹೌಸ್ನಲ್ಲಿ ಮೋದಿಯವರೊಂದಿಗೆ ಮಾತುಕತೆ ಮತ್ತು ಭೋಜನದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುಟಿನ್ ಅವರ ಭಾರತ ಭೇಟಿಗೆ ಒಂದು ದಿನ ಮೊದಲು ಪರಸ್ಪರ ವಿನಿಮಯ ಲಾಜಿಸ್ಟಿಕ್ ಬೆಂಬಲ ಒಪ್ಪಂದವನ್ನು ದೃಢಪಡಿಸಿದ್ದು, ಎರಡು ದೇಶದ ಯುದ್ಧನೌಕೆ, ಮಿಲಿಟರಿ ಪಡೆ ಮತ್ತು ವಿಮಾನ ಬಂದರು ಹಾಗೂ ವಾಯು ಪ್ರದೇಶಕ್ಕೆ ಸುಲಭವಾಗಿ ಪ್ರವೇಶ ರಚಿಸುವ ಒಪ್ಪಂದವಾಗಿದ್ದು, ಕಷ್ಟದ ಸಮಯದಲ್ಲಿ ಇದು ಗೇಮ್ ಚೇಂಜರ್ ಕೂಡ ಆಗಿರುತ್ತದೆ.
