ಬೆಂಗಳೂರು: ಕಾಂಗ್ರೇಸ್ ಹೈಕಮಾಂಡ್ ಕುರ್ಚಿ ಕಾದಾಟ ತಣ್ಣಗಾಗಲು ಸೂಚನೆ ನೀಡಿದ ನಡುವೆಯೇ, ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಒಗ್ಗಟ್ಟಿನ ಸಂದೇಶ ನೀಡಲು ಬ್ರೇಕ್ ಫಾಸ್ಟ್ ಮೀಟಿಂಗ್ಗಳನ್ನು ನಡೆಸುತ್ತಿರುವುದು ವಿಪಕ್ಷ ಟೀಕೆಗೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ ಸೋಶಿಯಲ್ ಮೀಡಿಯಾದಲ್ಲಿ ವ್ಯಂಗ್ಯವಾಡುವ ಮೂಲಕ, ಇಬ್ಬರ ನಡುವಿನ ಮಾತುಕತೆ ’ಕಮಿಷನ್-ಕುರ್ಚಿ ಸೆಟಲ್ಮೆಂಟ್’ ಆಗಿದೆ ಎಂದು ಚಿತ್ರಿಸುವ ಪೋಸ್ಟ್ ಹಾಕಿದ್ದು ಮತ್ತೊಂದು ಟ್ವೀಟ್ನಲ್ಲಿ ವಿದ್ಯಾರ್ಥಿಗಳಿಗೆ ಲಾಠಿ ಏಟು ಬೀಳುತ್ತಿರುವಾಗ ಸಿಎಂ-ಡಿಸಿಎಂ ನಾಟಿಕೋಳಿ ಬ್ರೇಕ್ಫಾಸ್ಟ್ ಆಸ್ವಾಧಿಸುತ್ತಿರುವುದು ನಾಚಿಕೆ ಕಾರ್ಯ ಎಂದು ಟೀಕಿಸಿದೆ.
