ಧಾರವಾಡ: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಒತ್ತಾಯಿಸಿ ಜನ ಸಾಮಾನ್ಯರ ವೇದಿಕೆ ಹಾಗೂ ವಿದ್ಯಾರ್ಥಿ ಸಂಘಟನೆಗಳು ಇಂದು ಹೋರಾಟ ನಡೆಸಿದ್ದು, ಹಿಂದಿನ ಅಹಿತಕರ ಘಟನೆಗಳನ್ನು ಮನಗಂಡು ಈ ಬಾರಿ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೆ ಪ್ರತಿಭಟನಾಕಾರರು ಅನುಮತಿ ನಿರಾಕರಿಸಿದರೂ ಕೂಡ ಹೋರಾಟ ಮುಂದುವರಿಸಿದ ಪರಿಣಾಮ ಶ್ರೀನಗರ ವೃತ್ತದಲ್ಲಿ 200 ಕ್ಕೂ ಹೆಚ್ಚು ಮಂದಿ ಸೇರಿದ್ದರಿಂದ ಒಬ್ಬರು ಕಮಿಷನರ್ ಸೇರಿದಂತೆ ಬಾರಿ ಪೊಲೀಸ್ ಪಡೆ ನಿಯೋಜಿಸಲಾಯಿತು. ಪ್ರತಿಭಟನಾಕಾರರು ಹೋರಾಟಕ್ಕೆ ಪಟ್ಟು ಹಿಡಿದ ಕಾರಣ ಮುಂಜಾಗ್ರತಾ ಕ್ರಮವಾಗಿ ಎರಡು ಬಸ್ಗಳಲ್ಲಿ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಜನಸಾಮಾನ್ಯರ ವೇದಿಕೆ ಹಾಗೂ ಇತರ ಸಂಘಟನೆಗಳು ಇಂದು ’ಧಾರವಾಡ ಚಲೋ’ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು, ಆದರೆ ಅದಕ್ಕೆ ಕಾನೂನು ಸುವ್ಯವಸ್ಥೆ ಹಾಗೂ ಪ್ರತಿಭಟನೆಗೆ ಅಸ್ಪಷ್ಟವಾಗಿರುವ ಕಾರಣ ಅನುಮತಿ ನೀಡಿಲ್ಲ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
