ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆದಿರುವ ದುಂಧುವೆಚ್ಚದ ಕುರಿತು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಗಂಭೀರ ಆರೋಪ ಮಾಡಿದ್ದಾರೆ. ಅವರು ಪಡೆದ ದಾಖಲೆಗಳ ಪ್ರಕಾರ ಸುವರ್ಣ ಸೌಧದಲ್ಲಿ ಸಭಾಧ್ಯಕ್ಷರ ಕುರ್ಚಿಗೆ ಮತ್ತು ಅಲ್ಲಿನ ಭಾವಚಿತ್ರಕ್ಕೆ 1 ಕೋಟಿಗೂ ಅಧಿಕ ವೆಚ್ಚ ಮಾಡಿರುವುದನ್ನು ಭೀಮಪ್ಪ ಗಡಾದ್ ಮಾಹಿತಿ ಹಕ್ಕಿನ ಮೂಲಕ ಬಹಿರಂಗ ಪಡಿಸಿದ್ದು ಸಾರ್ವಜನಿಕರ ತೆರಿಗೆ ಹಣವನ್ನು ಅಗತ್ಯವಿಲ್ಲದ ಖರ್ಚಿಗೆ ಬಳಸಲಾಗಿದೆ ಎಂದು ಅವರು ಸರ್ಕಾರದ ವಿರುದ್ಧ ಆರೋಪಿಸಿ, ಈ ವಸ್ತುಗಳನ್ನು ಜನತೆಗೆ ವೀಕ್ಷಣೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿದ್ದಾರೆ.
