ಬೆಂಗಳೂರು: ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವ ವೇಳೆ ವೇಗಮಿತಿ ಹಾಗೂ ಹೆಲ್ಮೆಟ್ ಕಡ್ಡಾಯಗೊಳಿಸುವ ನಿಯಮಗಳನ್ನು ತಕ್ಷಣ ಜಾರಿಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದ್ದು, ಇದರ ನಂತರ ಬೆಂಗಳೂರು ಟ್ರಾಫಿಕ್ ಪೊಲೀಸರು ಮಕ್ಕಳಿಗೆ ಹೆಲ್ಮೆಟ್ ಹಾಕಿಸದೇ ಬೈಕ್ನಲ್ಲಿ ಕರೆದುಕೊಂಡು ಹೋಗುವ ಪೋಷಕರ ವಿರುದ್ಧ ಕ್ರಮವನ್ನು ಕಠಿಣಗೊಳಿಸಿದ್ದಾರೆ. ಜಂಟಿ ಪೋಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹೇಳುವಂತೆ, 9 ತಿಂಗಳಿಂದ 4 ವರ್ಷದ ಮಕ್ಕಳಿಗೂ ಹೆಲ್ಮೆಟ್ ಅವಶ್ಯವಾಗಲಿದ್ದೂ, ಇದರ ಪರಿಷ್ಕರಣೆ ಮುಂದಿನ ಆರು ತಿಂಗಳಲ್ಲಿ ಜಾರಿಯಾಗಲಿದೆ. ಮಕ್ಕಳಿಗಾಗಿ ಹೆಲ್ಮೆಟ್ಗಳು ಮಾರುಕಟ್ಟೆಯಲ್ಲಿ ಸಾವಿರ ರೂಪಾಯಿ ವ್ಯಾಪ್ತಿಯಲ್ಲಿ ಲಭ್ಯವಿದೆ. ಸಂಚಾರ ಶಿಸ್ತು ಭೋಧನೆಗಾಗಿ ’ಒಂದು ದಿನ ಪೋಲೀಸ್ ಆಗಿ’ ಸೇರಿದಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಟ್ರಾಫಿಕ್ ಪೊಲೀಸರು ನಡೆಸುತ್ತಿದ್ದಾರೆ.
