ಮೈಸೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು ಎಂದು ಅವಹೇಳನಕಾರಿ ಹೇಳಿಕೆ ನೀಡಿರುವುದು ಇದೀಗ ವಿವಾದ ಎಬ್ಬಿಸಿದೆ. ಮೈಸೂರು ಮಾನಸಗಂಗೋತ್ರಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಿಳಿಮಲೆ ಯಕ್ಷಗಾನ ಕಲಾವಿದರು 6-8 ತಿಂಗಳು ಕಾಲ ತಿರುಗಾಟದಲ್ಲಿರುವ ಕಾರಣ ತಮ್ಮ ವಾಂಛೆ ತೀರಿಸಿಕೊಳ್ಳಲು ಸ್ತ್ರೀ ವೇಷದಾರಿಗಳನ್ನು ಬಳಸಿಕೊಳ್ಳುತ್ತಿದ್ದರು. ಒಂದು ವೇಳೆ ನಿರಾಕರಿಸಿದರೆ ಮರುದಿನ ರಂಗಸ್ಥಳದಲ್ಲಿ ಅವರಿಗೆ ಭಾಗವತರು ಪದ್ಯ ನೀಡುತ್ತಿರಲಿಲ್ಲ ಎಂಬುದಾಗಿ ಹೇಳಿದ್ದು ಇದೀಗ ಈ ಹೇಳಿಕೆ ಬಾರೀ ವಿವಾದ ಸೃಷ್ಟಿಸಿದೆ.
