ರಾಣೇಬೆನ್ನೂರು: ಹೆಚ್ಚು ಉದ್ಯಮಗಳು ಸ್ಥಾಪನೆಯಾಗಿ, ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕು ಹಾಗೂ ಜನರಿಗೆ ಉತ್ತಮ ಸೇವೆ ಮತ್ತು ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ವಾಹನ ಉದ್ಯಮ ಮಾರುಕಟ್ಟೆಗೆ ಬಲ ನೀಡಬೇಕು. ವಾಹನ ಮಾರಾಟ ವ್ಯವಸ್ಥಾಪಕರು ಜನರಿಗೆ ಹಾಗೂ ಚಾಲಕರಿಗೆ ರಸ್ತೆ ಸುರಕ್ಷತೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು ಎಂದು ಹುಂಡೈ ಕಂಪನಿಯ ನೂತನ ವಿನ್ಯಾಸದ ವೆನ್ ಯು ಕಾರ್ ಬಿಡುಗಡೆಗೊಳಿಸಿದ ರಾಣೇಬೆನ್ನೂರು ದಂಡಾಧಿಕಾರಿ ಆರ್.ಎಚ್ ಭಗವಾನ್ ಹೇಳಿದರು. ಇದೆ ವೇಳೆ ಹುಂಡೈ ಕಾರು ಶೋರೂಮ್ನ ಮಾಲಿಕ ಜಾವಿದ್ ಸಾಬ್ ಮಾತನಾಡಿ ದಾವಣಗೆರೆ, ಚಿತ್ರದುರ್ಗ ಹಾಗೂ ರಾಣೇಬೆನ್ನೂರುಗಳಲ್ಲಿ ನಮ್ಮ ಹುಂಡೈ ಕಾರ್ ಶೋರೂಮ್ ಸ್ಥಾಪಿಸಿದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದೇವೆ. ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ದೊರೆಯುತ್ತಿರುವುದು ನಮಗೆ ಹೆಮ್ಮೆ ಅನಿಸಿದೆ. ಇದೇ ರೀತಿಯಲ್ಲಿ ನೂತನ ತಂತ್ರಜ್ಞಾನದ ಹೊಸ ಮಾದರಿಯ ಕಾರುಗಳು ಸಮರ್ಪಕವಾಗಿ ಗ್ರಾಹಕರಿಗೆ ನೀಡುತ್ತಿರುವುದು ನಮಗೆ ಮತ್ತು ನಮ್ಮ ಕಂಪನಿಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ ಎಂದು ಹೇಳಿದರು. ಈ ವೇಳೆ ಜಟ್ಟಪ್ಪ ಸಿದ್ದನಗೌಡ ಹಿರೇಗೌಡರು, ಅಶೋಕ್ ಗಂಗನ ಗೌಡ್ರು, ಬಸವರಾಜ್ ಎನ್ ಪಾಟೀಲ್, ಬಸವರಾಜ್ ಅಟ್ಟಣಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ರಜವೀ, ರಿಯಾನ್, ವೆಂಕಟೇಶ, ಅಂಜಲಿ ಹಾಗೂ ನಿರೂಪಕ ಎಂ.ಬಿ ನಾಗರಾಜ್ ಕಾಕನೂರು ಉಪಸ್ಥಿತರಿದ್ದರು.
