
ರಾಗಿ: ರಾಗಿಯು ಹಲವಾರು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ರಾಗಿಯಿಂದ ಗಂಜಿ, ಅಂಬಲಿ, ಮುದ್ದೆ, ಇಡ್ಲಿ, ದೋಸೆ ಹಾಗೂ ಮಣ್ಣಿಯನ್ನು ಮಾಡಿ ಸೇವಿಸಬಹುದಾಗಿದೆ. ರಾಗಿಯನ್ನು ಶೇವಿಸುವುದರಿಂದ ಮಧುಮೇಹಿಗಳಲ್ಲಿ ಮಧುಮೇಹ ನಿಯಂತ್ರಣಗೊಳ್ಳುತ್ತದೆ. ಇದರಲ್ಲಿರುವ ಫೈಬರ್ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ರಾಗಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ರಕ್ತ ಹೀನತೆಯನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಕ್ಯಾಲ್ಸಿಯಂ ಹಾಗೂ ರಂಜಕದ ಅಂಶವನ್ನು ಹೊಂದಿರುವುದರಿಂದ ಮೂಳೆಗಳನ್ನು ಬಲ ಪಡಿಸುತ್ತದೆ. ರಾಗಿಯನ್ನು ಸೇವೆಸುವುದರಿಂದ ತೂಕವನ್ನು ನಿಯಂತ್ರಿಸುತ್ತದೆ. ಕಡಿಮೆ ಕೊಲೆಸ್ಟ್ರಾಲ್ ಹೊಂದಿರುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.