
ಕಾರ್ಕಳ: ಈ ಹಿಂದೆ ಆಗಸ್ಟ್ ೨೩ರಂದು ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಗೆ ಒಳಪಟ್ಟ ಮುಂಡೂರು ತೋಟದ ಮನೆಯಲ್ಲಿ ಕಳವಾಗಿದ್ದು. ಇದೀಗ ಪೋಲಿಸರು ಈ ಪ್ರಕರಣವನ್ನು ಭೇದಿಸಿದ್ದಾರೆ. ಪೋಲಿಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳವು ಮಾಡಿದವರು ಅಪ್ರಾಪ್ತ ವಯಸ್ಕರಾಗಿದ್ದು.12ಜನ ಕಳ್ಳರು ಅಪ್ರಾಪ್ತರಾಗಿದ್ದಾರೆ. ಬೇರೆ ಬೇರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಆ 12ಮಂದಿಯನ್ನು ಬಂದಿಸಿ 05ಲಕ್ಷರೂ ಮೊತ್ತದ1100ಕೆಜಿ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಬಟ್ಟೆ ಕೊಳ್ಳಲು ಹಾಗೂ ಇನ್ನಿತರ ಮೋಜಿಗಾಗಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ.
ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ನಿರೀಕ್ಷಕ ಮಂಜಪ್ಪ ಅವರ ನೇತೃತ್ವದಲ್ಲಿ, ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್ಐಗಳಾದ ಪ್ರಸನ್ನ ಎಂಎಸ್ ಸುಂದರ , ಎಎಸ್ಐಗಳಾದ ಸುಂದರ ಗೌಡ, ಪ್ರಕಾಶ, ಸಿಬ್ಬಂದಿ ರುದ್ರೇಶ್, ಮಹಂತೇಶ್, ಚಂದ್ರಶೇಖರ್, ಜಿಲ್ಲಾ ಪೋಲಿಸ್ ಕಛೇರಿಯ ಸಿಡಿಆರ್ ಸಿಬ್ಬಂದಿ ದಿನೇಶ್, ನಿತಿನ್ ಅವರ ತಂಡ ಕಾರ್ಯಚರಣೆ ನಡೆಸಿದ್ದಾರೆ.