
ಹೊಸನಗರ: ಮಳೆಯಿಂದಾಗಿ ಹಲವಾರು ಅನಾಹುತಗಳು ಸಂಭವಿಸುತ್ತಿದ್ದು, ತಾಲ್ಲೂಕಿನ ಪುರಪ್ಪೆಮನೆಯಿಂದ ಸಾಗರ ತಾಲ್ಲೂಕಿನ ಬಿಲಗೋಡಿ ಸಂಪರ್ಕಿಸುವ ತಾರನಬೈಲು ರಸ್ತೆ ಮಳೆಯಿಂದಾಗಿ ಕುಸಿದಿದೆ. ಘಟನಾ ಸ್ಥಳಕ್ಕೆ ಮಾಜಿ ಸಚಿವರಾದ ಹರತಾಳು ಹಾಲಪ್ಪನವರು ಭೇಟಿ ನೀಡಿದ್ದಾರೆ. ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅತೀವೃಷ್ಠಿ ಅನಾಹುತಕ್ಕೆ ಸ್ಪಂದಿಸುತ್ತಿಲ್ಲ. ಇಷ್ಟೆಲ್ಲ ಅನಾಹುತ ನಡೆದರೂ ಕೂಡ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂದು ತಿಳಿಯುತ್ತಿಲ್ಲ ಎಂದು ಅಸಮಾದನಗೊಂಡರು. ತಾರನಬೈಲು ರಸ್ತೆ ಕುಸಿತ ತುಂಬಾ ಭಯಾನಕವಾಗಿದೆ. ಆದರೂ ಈ ತನಕ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಭೇಟಿ ನೀಡಿ, ಪರಿಶೀಲನೆ ನಡೆಸಿಲ್ಲ ಎಂದರು. ಇಂತಹ ಘಟನೆಗಳು ನಡೆದ ಸಮಯದಲ್ಲಿ ಸ್ಥಳೀಯ ವಿಎ, ಆರ್ಐ, ತಹಶೀಲ್ದಾರ್ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ಈ ಘಟನಾ ಸಂಬಂಧ ಜಿಲ್ಲಾಧಿಕಾರಿಯನ್ನು ಭೇಟಿ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಘವೇಂದ್ರ, ಪ್ರಮುಖರಾದ ಅನ್ನಪೂರ್ಣ, ರವಿಸುಮಾ, ಗಣಪತಿ, ರಮೇಶ, ಗುರುಪ್ರಸಾದ್, ಎ.ಆರ್ ಮಂಜುನಾಥ್, ಅರುಣ್ ಕುಮಾರ್, ಬಿ.ಆರ್ ಕೃಷ್ಣಮೂರ್ತಿ, ಎ.ಎನ್ ಪ್ರಕಾಶ್, ಮಹಾಲಕ್ಷೀ ಉಪಸ್ಥಿತರಿದ್ದರು.