
ಉಡುಪಿ: ನಕಲಿ ಬೀಗದ ಕೀ ಯನ್ನು ಬಳಸಿಕೊಂಡು ಚಿನ್ನ ಕದ್ದ ಪ್ರಕರಣ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿಯ ಜ್ಯಯವೆಲರಿ ವರ್ಕ್ಶಾಪ್ವೊಂದರಲ್ಲಿ ನಡೆದಿದೆ. ಕಳ್ಳರು ಈ ಕೃತ್ಯಕ್ಕೆ ಚಿನ್ನ ಮತ್ತು ಬೆಳ್ಳಿ ಕರಗಿಸುವ ವೈಭವ್ ರಿಫೈನರ್ ಎಂಬ ಅಂಗಡಿಯ ನಕಲಿ ಬೀಗವನ್ನು ಬಳಸಿಕೊಂಡು ಒಳನುಗ್ಗಿದ್ದಾರೆ ಎನ್ನಲಾಗಿದೆ. ಡ್ರಾವರ್ನಲ್ಲಿ 600ಗ್ರಾಂ ತೂಕದ 06ಲಕ್ಷರೂ ಮೌಲ್ಯದ ಚಿನ್ನದ ಗಟ್ಟಿ ಹಾಗೂ ಚಿನ್ನದ ದ್ರಾವಣವನ್ನು ವಿವಿದ ವಸ್ತುಗಳನ್ನು ಕದ್ದಿದ್ದಾರೆ ಎಂದು ತಿಳಿದು ಬಂದಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಳೇ ಕಾರ್ಮಿಕರೇ ಈ ಕೃತ್ಯವನ್ನು ಮಾಡಿರಬಹುದು ಎಂದು ಸಂದೇಹ ಪಟ್ಟಿದ್ದಾರೆ. ಪೋಲಿಸರು ಈ ಪ್ರಕರಣ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿಯ ಡಿವೈಎಸ್ಪಿ ಪ್ರಭು ಡಿ.ಟಿ, ಉಡುಪಿ ನಗರ ಠಾಣಾ ಪೋಲಿಸ್ ನಿರೀಕ್ಷಕ ಮಂಜುನಾಥರವರು ಭೇಟಿ ನೀಡಿದ್ದಾರೆ.