
ಬೆಂಗಳೂರು: ಪೇಜಾವರ ಶ್ರೀ ಗಳ ವಿಶ್ವಾವಸು ನಾಮ ಸಂವತ್ಸರದ 38 ನೇ ಚಾತುರ್ಮಾಸ್ಯ ವ್ರತದ ಸಮಾರೋಪ ಸಮಾರಂಭವು ದಿನಾಂಕ 6/9/25 ಶನಿವಾರ ಸಂಜೆ 6 ಗಂಟೆಗೆ ವಿದ್ಯಾಪೀಠದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಶಿರೂರು ಮಠದ ಶ್ರೀ ಪಾದಂಗಳವರು ಹಾಗು ಪೆಜಾವರ ಶ್ರೀಗಳು ಉಪಸ್ಥಿತರಿದ್ದು ಭಕ್ತರನ್ನು ಅನುಗ್ರಹಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಹೈ ಕೋರ್ಟ್ ನ ನ್ಯಾಯಾಧೀಶರು ಶ್ರೀ ಶ್ರೀಶಾನಂದರವರು ಮತ್ತು ವಿದ್ವಾಂಸರಾದ ಶ್ರೀ ಸತ್ಯ ಧ್ಯಾನಾಚಾರ್ಯ ಕಟ್ಟಿರವರು ಹಾಗೂ ವೇದಮೂರ್ತಿ ರಾಘವೇಂದ್ರ ಭಟ್ ಮತ್ತು ಶಿರೂರು ಮಠದ ದಿವಾನರು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ವೇದಮೂರ್ತಿ ರಾಘವೇಂದ್ರ ಭಟ್ ರವರಿಗೆ ಸನ್ಮಾನಿಸಿ ಅಭಿನಂದನಾ ಪತ್ರ ವನ್ನು ನೀಡಿ ಆಶೀರ್ವದಿ ಸಲಾಯಿತು.