
ಜ್ಯೋತಿಷ್ಯದ ಪ್ರಕಾರ ಈ ತಿಂಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಶುಭದಾಯಕವಾಗಿದೆ. ಆದರೆ ಕೆಲವುರಾಶಿಗಳು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಸೆಪ್ಟೆಂಬರ್ ತಿಂಗಳು ಯಾವ ರೀತಿ ಪರಿಣಾಮ ಬೀರುತ್ತದೆ ತಿಳಿಯೋಣ ಬನ್ನಿ..
ಮೇಷ: ಈ ತಿಂಗಳು ಮೇಷ ರಾಶಿಯವರಿಗೆ ಅದ್ಭುತವಾದ ತಿಂಗಳಾಗಿದೆ. ಸಕಾರಾತ್ಮಕ ಶಕ್ತಿಯನ್ನು ಆಧರಿಸಿದೆ, ವಿಷಯಗಳು ಹೆಚ್ಚು ಸ್ಥಿರ ಮತ್ತು ಫಲಪ್ರದವಾಗುವುದನ್ನು ನೀವು ಕಂಡುಕೊಳ್ಳುವಿರಿ. ನಿಮ್ಮ ಸಂಬಂಧಗಳು ಬಲವಾಗಿ ಹಾಗೂ ಸ್ಥಿರವಾಗಿರುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ , ನಿಮ್ಮ ಹಿಂದಿನ ಎಲ್ಲಾ ಪ್ರಯತ್ನಗಳ ಫಲವನ್ನು ನೀವು ಅಂತಿಮವಾಗಿ ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಆನಂದಿಸುವ ಸಮಯ ಇದಾಗಿದೆ.ವೃಷಭ: ಈ ತಿಂಗಳು ನಿಮಗೆ ಸಂತೋಷದಿಂದ ತುಂಬಿರುತ್ತದೆ ಹಾಗೂ ವಿಶ್ರಾಂತಿ ಪಡೆಯಲು ಅವಕಾಶ ಪಡೆಯುತ್ತೀರಿ. ನೀವು ಸಣ್ಣ ರಜೆಯನ್ನು ಸಹ ಯೋಜಿಸಬಹುದು. ವೈಯಕ್ತಿಕ ಮತ್ತು ವೃತ್ತಿಪರ ಜೀವನವು ಸಮತೋಲನ ಹಾಗೂ ಸ್ಥಿರವಾಗಲಿದೆ.
ಮಿಥುನ: ಸ್ವಲ್ಪ ಮಟ್ಟಿಗೆ ಒತ್ತದಿಂದ ಇರುತ್ತದೆ. ಈ ತಿಂಗಳು ಒಂಟಿ ತನದ ಭಾವನೆ ಕೂಡಿರುತ್ತದೆ. ಸಂಬಂಧಗಳಲ್ಲಿ ಅಪನಂಬಿಕೆ ಹಾಗೂ ವೃತ್ತಿ ಜೀವನದಲ್ಲಿ ಸಿಲುಕಿಕೊಂಡಂತೆ ಅನಿಸುತ್ತದೆ ಈ ಸಮಸ್ಯೆಗಳನ್ನು ಎದುರಿಸುವ ಸಮಯ ಇದಾಗಿದೆ.
ಕರ್ಕಾಟಕ: ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಈ ತಿಂಗಳು ನಿಮಗೆ ಸಮೃದ್ಧಿ ಹಾಗೂ ಭದ್ರತೆಯನ್ನು ನೀಡುತ್ತದೆ. ಜೀವನದಲ್ಲಿ ಕೆಲವು ಹೊಸ, ಸಕಾರಾತ್ಮಕ ಸಂಬಂಧಗಳನ್ನು ಕಾಣಬಹುದು. ಕೆಲಸಗಳಲ್ಲಿಯೂ ಹಾಗೂ ಹಿಂದಿನ ಎಲ್ಲಾ ಫಲವನ್ನು ನೀವು ನಿರೀಕ್ಷಿಸಬಹುದಾಗಿದೆ.
ಸಿಂಹ: ನಿಮಗೆ ಬೋನಸ್ ಸಿಗುವ ಸಾಧ್ಯತೆ ಇದೆ. ನಿಮ್ಮ ಸಾಂದರ್ಭಿಕ ಸಂಭಾಷಣೆಗಳು ಗಂಭೀರವಾಗಬಹುದು. ದೈನಂದಿನ ವ್ಯಾಯಾಮಕ್ಕೆ ಆಧ್ಯತೆ ನೀಡುವ ಮೂಲಕ ಸಕ್ರೀಯವಾಗಿರಲು ಪ್ರಯತ್ನಿಸಿ. ನಿಮ್ಮ ಕಠಿಣ ಶ್ರಮ ಗಮನಕ್ಕೆ ಬರಬಹುದು ಆದರೆ ನೀವು ಮೆಚ್ಚುಗೆಯನ್ನು ನಿರೀಕ್ಷಿಸದೆ ಪ್ರಯತ್ನಿಸುತ್ತಿರುವುದು ಉತ್ತಮವಾಗಿದೆ.
ಕನ್ಯಾ: ಈ ತಿಂಗಳು ನೀವು ನಿರ್ಲಕ್ಷ್ಯ ತೋರುತ್ತಿದ್ದ ಸಮಸ್ಯೆಗಳನ್ನು ಈಗ ಎದರಿಸಬೇಕಾಗುತ್ತದೆ. ಇದು ಒಂಡಿ ತನದ ಭಾವನೆಯನ್ನು ಸೂಚಿಸುತ್ತದೆ. ನಿಮ್ಮ ಸಂಬಂಧಗಳಲ್ಲಿ ನಿಮಗೆ ನಂಬಿಕೆಯ ಸಮಸ್ಯೆ ಹಾಗೂ ವೃತ್ತಿ ಜೀವನದಲ್ಲಿ ಸಿಲುಕಿದಂತೆ ಭಾಸವಾಗುತ್ತದೆ.
ತುಲಾ: ಈ ತಿಂಗಳು ಹೊಸ ಅವಕಾಶಗಳ ತಿಂಗಳಾಗಿರುತ್ತದೆ. ಈ ತಿಂಗಳು ನಿಮಗೆ ಹಲವು ಆಯ್ಕೆಗಳಿವೆ ಮತ್ತು ನಿಮಗೆ ಯಾವುದು ಸರಿ ಎಂದು ತಿಳಿದಿಲ್ಲ ಎಂದು ನಿಮಗೆ ಅನಿಸಬಹುದು. ವಿಶ್ವವು ನಿಮ್ಮ ಆದ್ಯತೆಯನ್ನು ಪರೀಕ್ಷಿಸುತ್ತದೆ ಮತ್ತು ನೀವು ಅಸಮತೋಲನ ಮತ್ತು ಗೊಂದಲದ ಭಾವನೆಗಳೊಂದಿಗೆ ಹೋರಾಡಬಹುದು. ನಿಮಗೆ ನಿಜವಾಗಿಯೂ ಯಾವುದು ಮುಖ್ಯ ಎಂಬುದನ್ನು ಕಂಡುಹಿಡಿಯುವ ಸಮಯ ಈ ತಿಂಗಳಾಗಿದೆ.
ವೃಶ್ಚಿಕ: ಈ ತಿಂಗಳು ಶಾಂತಿಯುತ ತಿಂಗಳಾಗಿರುತ್ತದೆ. ನಿಮ್ಮ ಸ್ವಭಾವ ಶಾಂತ ಮತ್ತು ದಯೆಯಿಂದ ಕೂಡಿರುತ್ತದೆ. ನಿಮ್ಮ ಭಾವನಾತ್ಮ ಭಾಗವು ಮೇಲುಗೈ ಸಾಧಿಸುತ್ತದೆ ಹಾಗೂ ನಿಮ್ಮ ಸುತ್ತಮುತ್ತಲಿನವರನ್ನು ನೋಡಿಕೊಳ್ಳುವುದು ನಿಮಗೆ ಆರಾಮದಾಯಕ ಎನ್ನಿಸುತ್ತದೆ.
ಧನು: ನಿಮ್ಮ ತಾಳ್ಮೆ ಪರೀಕ್ಷೆಗೆ ಸಿದ್ದರಾಗಿರಿ. ನಿಮ್ಮ ಕುಟುಂಬ ಹಾಗೂ ನಿಮ್ಮ ಸಂಗಾತಿಯೊಂದಿಗೆ ವಾದಗಳನ್ನು ಹೊಂದಿರಬಹುದು ಹಾಗೂ ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ಅಸ್ಥಿರತೆಯನ್ನು ಸಹ ಎದುರಿಸಬಹುದು. ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತಿಲ್ಲ ಎಂದು ನೀವು ಭಾವಿಸಬಹುದು
ಮಕರ: ಈ ತಿಂಗಳು ನಿಮಗೆ ಶಿಸ್ತಿನ ತಿಂಗಳಾಗಿರುತ್ತದೆ. ಸಮತೋಲಿತ ಹಾಗೂ ಶಿಸ್ತಿನ ಜೀವನ ಪ್ರಾರಂಭವಾಗುತ್ತದೆ. ಇದು ಹೊಸ ಪ್ರೇಮ ಜೀವನದ ಆರಂಭಕ್ಕೆ ಕಾರಣವಾಗಬಹುದು. ವೃತ್ತಿ ಜೀವನದಲ್ಲಿ ಏರಿಳತಗಳಿಗೆ ಸಿದ್ಧರಾಗಿರಿ.
ಕುಂಭ: ಈ ತಿಂಗಳು ಸಂಬಂಧಗಳ ಬಲವರ್ಧನೆಯನ್ನು ಸಂಕೇತಿಸುತ್ತದೆ. ನಿಮ್ಮ ಪ್ರೇಮ ಜೀವನವು ನಿಮಗೆ ಬಹಳಷ್ಟು ಸಂತೋಷವನ್ನು ತರುತ್ತದೆ ಹಾಗೂ ಹಳೆಯ ಸಂಬಂಧವು ಗಾಡವಾಗುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ಬಲವಾದ ಸಂಬಂಧಗಳು ಅಥವಾ ಪಾಲುದಾರಿಕೆ ರೂಪುಗೊಳ್ಳಬಹುದು.
ಮೀನ: ನಿಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮಿಮಗೆ ಅವಕಾಶವಿದೆ. ಈ ತಿಂಗಳು ನಿಮ್ಮ ಶಕ್ತಿಯ ಪರೀಕ್ಷೆಯಾಗಿದೆ, ಆದರೆ ನೀವು ಹೆಚ್ಚು ಕೆಲಸ ಮಾಡಬೇಡಿ ಎಂಬದನ್ನು ನೆನಪಿಡಿ. ನೀವು ವಿಶ್ರಾಂತಿಯನ್ನು ಪಡೆಯಲು ಸಮಯವನ್ನು ತೆಗೆದುಕೊಳ್ಳಿ.