
ಶಿವಮೊಗ್ಗ: ಬಾಲಕಿಯೊಬ್ಬಳು ಒಂಭತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಬಾಲಕಿಯ ತಂದೆ ತಾಯಿಯು ಕೂಲಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಮಗ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಬಾಲಕಿಯು ಹೊಟ್ಟೆ ನೋವೆಂದು ಶಾಲೆಗೆ ರಜೆ ಹಾಕಿದ್ದು, ಎರಡು ದಿನಗಳ ನಂತರ ಬಾಲಿಕಯು ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ. ಪೋಷಕರು ಆತಂಕಕ್ಕೊಳಗಾಗಿದ್ದಯ, ತಕ್ಷಣ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಸಿದ್ದಾರೆ. ಏಳು ತಿಂಗಳಿಗೆ ಜನ್ಮ ನೀಡಿರಬಹುದೆಂದು ವೈದ್ಯರು ತಿಳಿಸಿದ್ದಾರೆ. ಮಗು ಒಂದೂವರೆ ಕೆಜಿ ತೂಕ ಇದ್ದು ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೋಲಿಸರು ಅಲರ್ಟ್ ಆಗಿದ್ದಾರೆ. ಬಾಲಕಿಯು ಗೊಂದಲದ ಹೇಳಿಕೆಯನ್ನು ನೀಡುತ್ತಿದ್ದು, ಬಾಲಕಿಯ ಕೌನ್ಸಲಿಂಗ್ ನಡೆಸಿದ ನಂತರ ಹೆಚ್ಚಿನ ವಿಚಾರಣೆ ನಡೆಸಲು ನಿರ್ಧಾರ ಮಾಡಲಾಗಿದೆ.