
ಕುಶಾಲನಗರ: 23ನೇ ವರ್ಷದ ಗೌರಿ ಗಣೇಶ ಹಬ್ಬವನ್ನು ಇಂದಿರಾ ಬಡಾವಣೆ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ಮತ್ತು ಗೋಲ್ಡನ್ ಗೆಳೆಯರ ಬಳಗದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಸ್ಥಳೀಯ ಮಹಿಳೆಯರಿಗೆ, ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ಆಯೋಜಿಲಾಗಿತ್ತು. ಪೂಜೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಗೋಲ್ಡನ್ ಗೆಳೆಯರ ಬಳಗದ ಅಧ್ಯಕ್ಷ ಭಕ್ತರಾಜು ಮಾತನಾಡಿದರು, ಯಾವುದೇ ಹೊಸ ಕಾರ್ಯಕ್ರಮಗಳಲ್ಲಿ ಮೊದಲು ವಿಘ್ನವಿನಾಶಕನಾದ ಗಣಪತಿಯನ್ನು ಪೂಜಿಸಲಾಗುತ್ತದೆ. ಸಮಾಜದ ಜನರನ್ನು ಒಗ್ಗೂಡಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಜಾತಿ-ಭೇದವೆನ್ನೆದ ಎಲ್ಲರೂ ಸಂತೋಷದಿಂದ ಇಂತಹ ಕಾರ್ಯಕ್ರಮಗಳಲ್ಲಿ ಬಾಗವಹಿಸಬೇಕು ಎಂದರು. ಪರಸ್ಪರ ಪ್ರೀತಿ ವಾತ್ಸಲ್ಯ ಹಾಗೂ ವಿಶ್ವಾಸದಿಂದ ಬೆರೆಯಲು ಬಡಾವಣೆಯಲ್ಲಿ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಗೋಲ್ಡನ್ ಗೆಳೆಯರ ಬಳಗ, ಉಪಾಧ್ಯಕ್ಷ ರಿಯಾಜ್, ಖಜಾಂಚಿ ಶರಣ್, ಕಾರ್ಯದರ್ಶಿ ಆದಂ, ಪ್ರಮುಖರಾದ ಜಗದೀಶ ಕುಮಾರ್, ಯತೀಶ, ಗಿರೀಶ, ಮನು, ಪೂರ್ಣಚಂದ್ರ, ರಿತಿನ್, ಸಮೀವುಲ್ಲಾ, ಮಂಜು ಹಾಗೂ ಧನು ಮತ್ತಿತರರು ಉಪಸ್ಥಿತರಿದ್ದರು.