
ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದಲ್ಲಿ ಗ್ರಾಮ ದೇವತೆಯರಾದ ಲಕ್ಕವ್ವ ಮತ್ತು ದ್ಯಾಮವ್ವ ದೇವತೆಯರ ಶ್ರದ್ದಾ, ಭಕ್ತಿ, ವೈಭವದಿಂದ ಅದ್ಧೂರಿಯಾಗಿ ಎರಡು ದಿನಗಳ ಕಾಲ ಜರಗಿದ ಜಾತ್ರಾ ಮಹೋತ್ಸವ.
ಜಾತ್ರಾ ಮಹೋತ್ಷವದ ಮೊದಲನೆಯ ದಿನ ಮುಂಜಾನೆ ದೇವತೆಯರಿಗೆ ಪಂಚಾಮೃತ ಅಭಿಷೇಕ ಮಾಡಿ ನಂತರ ಸರ್ವ ಧರ್ಮದ ಭಕ್ತಾದಿಗಳು ಸೇರಿಕೊಂಡು ಸವಾಲು ಮಾಡಿ ಗುಡಿಯಿಂದ ದೇವತೆಯರನ್ನು ಮುತ್ತೂರ ಗ್ರಾಮದ ಮುಂದೆ ಹರಿದಿರುವ ಪವಿತ್ರ ಕೃಷ್ಣಾ ನದಿಯವರೆಗೆ ಮುತೈದೆಯರಿಂದ ಆರತಿ ವಿವಿಧ ವಾದ್ಯ ಮೇಳ ಗಳೊಂದಿಗೆ ತೆಲೆಯ ಮೇಲೆ ದೇವತೆಗಳನ್ನು ಹೋತ್ತುಕೊಂಡು ಹೋಗಿ, ತದನಂತರ ದೇವಿಯರನ್ನು ಪವಿತ್ರ ಕ್ರಷ್ಣಾ ನದಿ ಸ್ನಾನ, ಪೂಜಾ ಕೈಂಕರ್ಯಗಳು ದೇವತೆಯರಿಗೆ ಅಲಂಕಾರ ಮಂಗಳಾರತಿ ಮುಗಿಸಿಕೊಂಡು ಬಂದ ನಂತರ ದೇವತೆಯರನ್ನು ಮುತ್ತೂರ ಗ್ರಾಮದ ಅಗಸಿ ಕಟ್ಟೆಯ ಮೇಲೆ ಕೂರಿಸುತ್ತಾರೆ. ತದನಂತರ ಗ್ರಾಮದ ಸುಮಂಗಲೆಯರು ಮುತೈದೆಯರು ಹೆಣ್ಣು ಮಕ್ಕಳಿಂದ ನೈವೆದ್ಯೆ ಅರ್ಪಿಸಿ ಅದೆ ದಿನ ರಾತ್ರಿ ಗ್ರಾಮಸ್ಥರಿಗಾಗಿ ಸುತ್ತಮುತ್ತಲಿನ ಹಳ್ಳಿಯ ಜನತೆಗೆ ಪೌರಾಣಿಕ ಬಯಲಾಟ ಹಾಗೂ ಮನರಂಜನೆ ಕಾರ್ಯಕ್ರಮ ಗಳನ್ನು ಆಯೊಜಿಸುತ್ತಾರೆ.
ಮರುದಿನ ಬೆಳ್ಳಿಗೆ ಗ್ರಾಮದ ಎಲ್ಲಾ ಬಕ್ತಾದಿಗಳು ಸೇರಿ ದೇವತೆಯರಿಗೆ ಕೃಷ್ಣಾ ನದಿಯಿಂದ ನೀರು ತಂದು ಗ್ರಾಮ ದೇವಿಯರ ಪಾದಕ್ಕೆ ಅರ್ಪಿಸಿ ಗ್ರಾಮದ ಮುತ್ತೈದೆಯರು ಎಲ್ಲರೂ ಸೇರಿ ಉಡಿ ತುಂಬುತ್ತಾರೆ ಈ ಸಂದರ್ಭದಲ್ಲಿ ನೂರಾರು ಭಕ್ತರು ಸೇರಿಕೊಂಡು ದೇವಿಯರನ್ನು ಅಗಸಿ ಕಟ್ಟಿಯ ಮೇಲಿಂದ ಪುನ: ಗುಡಿಗೆ ಕರೆದುಕೊಂಡು ಹೋಗಲು ಸವಾಲು ಮಾಡಿ ತಲೆಯ ಮೇಲೆ ದೇವತೆಯರನ್ನು ಹೊತ್ತುಕೊಂಡು ಹೋಗವಾಗ ಭಕ್ತರ ಇಷ್ಟಾರ್ಥ ಪುರೖಸುವುದಕ್ಕಾಗಿ ಭಕ್ತಾದಿಗಳು ಸಂತೋಷ ಸಂಭ್ರಮದಿಂದ 2 ಸಾವಿರ ಕೇಜಿ ಬಂಡಾರವನ್ನು ತಂದು ದೇವತೆಯರಿಗೆ ಹಾರಿಸಿ ಅರ್ಪಿಸಿ ಅದ್ದೂರಿಯಾಗಿ ಮರಳಿ ದೇವಸ್ಥಾನದಲ್ಲಿ ಪ್ರತಿಸ್ಠಾಪಿಸುತ್ತಾರೆ. ಇದೆ ಕಾರಣದಿಂದ ಈಗ ಈ ಗ್ರಾಮದೇವತೆಯರ ಜಾತ್ರೆಯು ಬಂಡಾರದ ಜಾತ್ರೆಯೆಂದು ಪ್ರಸಿದ್ಧಿ ಪಡೆಯುತ್ತಿದೆ.