
ದಾಳಿಂಬೆ ಹಣ್ಣನ್ನು ಹಲವಾರು ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಹಣ್ಣು, ಬೇರು , ದಾಳಿಂಬೆ ಹೂ, ಚಿಗುರು ಎಲೆಗಳಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ. ಹಣ್ಣನ್ನು ತಿನ್ನುವುದರಿಂದ ರಕ್ತ ಹೀನತೆಯನ್ನು ತಡೆಗಟ್ಟುತ್ತದೆ. ಮಧುಮೇಹವನ್ನು ಹೊಂದಿರುವವರು ದಾಳಿಂಬೆ ಹಣ್ಣನ್ನು ಸೇವಿಸಬಾರದು ಏಕೆಂದರೆ ಇದರಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಕೂಡಿರುತ್ತದೆ. ಇದರ ಬೇರನ್ನು ಅರೆದು ಹಣೆಗೆ ಹಚ್ಚುವುದರಿಂದ ತಲೆನೋವು ಶಮನವಾಗುತ್ತದೆ. ದಾಳಿಂಗೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅದನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಬೇದಿ ನಿವಾರಣೆಯಾಗುತ್ತದೆ. ಹೂವು ಹಾಗೂ ಚಹುರಿನಕಷಾಯ ರಕ್ತ ಬೇದಿಯನ್ನು ಕಡಿಮೆಯಾಗುತ್ತದೆ. ಇದರ ಬೇರಿನಿಂದ ಲಾಗಿನ ಹುಳುವಿನ ಸಮಸ್ಯೆಯನ್ನು ನಿವಾರಿಸುತ್ತದೆ. ದಾಳಿಂಬೆ ಚಿಗುರಉನಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶಮನವಾಗುತ್ತದೆ. ಈ ಹಣ್ಣನ್ನು ಸೇವಿಸುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹೃದಯದ ಸಮಸ್ಯೆಗೆ ಉತ್ತಮ ಹಣ್ಣಾಗಿದೆ. ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ.