
ಉಡುಪಿ: ರಾಜಸ್ಥಾನದ ಮೂಲದ ಜೈದ್ ಮೊಹಮದ್ ಯಾನೆ ಖಾನ್ ಹಾಗೂ ಬಾಲಕ ಆನ್ ಲೈನ್ ವೀಡಿಯೋಕಾಲ್ ಮುಖಾಂತನೆ ವಂಚಿಸುತ್ತಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೋಲಿಸರು ಬಂದಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಲಕ್ಷಾಂತರೂ ರೂಪಾಯಿಗಳು, 05 ಮೊಬೈಲ್ಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇತರ ಆರೋಪಿಗಳು ತಲೆಮರಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಫೇಸ್ ಬುಕ್ ಮುಖಾಂತರ ಯುವತಿಯ ಪರಿಚಯವಾದ ದೂರದಾರ, ನಂತರ ವೀಡಿಯೋ ಕಾಲ್ ಮಾಡಿ ಸ್ವಿಕರಿಸಿದ ಕೆಲ ನಿಮಿಷಗಳಲ್ಲಿ ಅವರ ಮುಖ ಇರುವ ಅವರ ಮುಖ ಇರುವ ನಗ್ನ ವಿಡಿಯೋವನ್ನು ಪರ್ಯಾದಿದಾರರ ವಾಟ್ಸ್ಆಪ್ಗೆ ಕಳುಹಿಸಲಾಗಿತ್ತು. ಹಂತ ಹಂತವಾಗಿ ಒಟ್ಟು 4,44,999ರೂ ಗಳನ್ನು ವರ್ಗಾಯಿಸಿಕೊಂಡ ಆರೋಪಿ ಹಣ ನೀಡದಿದ್ದಲ್ಲಿ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡವುದಾಗಿ ಬೆದರಿಕೆ ಒಡ್ಡಿದ್ದಾನೆ.
ಸೆನ್ ಪೋಲಿಸ್ ಠಾಣೆಯಲ್ಲಿ ದೂರು ಸಾಖಲಾಗಿದ್ದು, ಪೋಲಿಸ್ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಪಿಎಸ್ಐ ಹರೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ತನಿಖೆ ಕೈಗೊಂಡಿತ್ತು ಹಾಗೂ ಗೋವಾದ ಮಂಡಗಾವ್ ರೈಲು ನಿಲ್ದಾಣದ ಹತ್ತಿರ ಆರೋಪಿಗಳನ್ನು ಸೆರೆ ಹಿಡಿಯಲಾಯಿತು