
ಕಾರ್ಕಳ: ಹಲವು ವರ್ಷಗಳಿಂದ ಚಿರತೆಯ ಉಪಟಳದಿಂದ ಊರಿನ ಜನರು ಅತಂಕದಿಂದಿದ್ದರು. ಕಾರ್ಕಳ ತಾಲ್ಲೂಕಿನ ರಾಮಸಮುದ್ರದಲ್ಲಿ ಅಗಾಗ ಚಿರತೆಯ ಓಡಾಟ ತಿಳಿದು ಬರುತಿತ್ತು. ಇದರಿಂದಾಗಿ ಅರಣ್ಯ ಇಲಾಖೆಗೆ ಫಾರ್ಮ್ ಉಸ್ತುವಾರಿ ಅಧಿಕಾರಿ ವರುಣ್ ಭಟ್ ಪತ್ರ ಬರೆದು ಚಿರತೆ ಸೆರೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಈ ಮನವಿಗೆ ಸ್ಪಂದಿಸಿದ್ದು, ತೋಟಗಾರಿಕಾ ಇಲಾಖೆಯ ಜಮೀನಿನಲ್ಲಿ ಬೋನು ಇರಿಸಿ ಅದರೊಳಗೆ ನಾಯಿಯನ್ನು ಇರಿಸಲಾಗಿತ್ತು. ಚಿರತೆಯ ಹಸಿವಿನಿಂದ ಆಹಾರವನ್ನು ಹುಡುಕುತ್ತಾ ಬಂದು ಬೋನಿನೊಳಗೆ ಬಂದು ಬಿದ್ದಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಯುತ್ತಿದ್ದಂತೆ ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.